ಮನೆ ರಾಷ್ಟ್ರೀಯ ಸೋನಿಯಾ ಗಾಂಧಿಗೆ ಮತ್ತೊಮ್ಮೆ ಕೋವಿಡ್ ದೃಢ

ಸೋನಿಯಾ ಗಾಂಧಿಗೆ ಮತ್ತೊಮ್ಮೆ ಕೋವಿಡ್ ದೃಢ

0

ನವದೆಹಲಿ(New Delhi): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮತ್ತೆ ಕೊರೊನಾ ಸೋಂಕು ತಗುಲಿದೆ.

ಜ್ವರದಿಂದ ಬಳಲುತ್ತಿದ್ದ ಅವರಿಗೆ ಪರೀಕ್ಷೆ ಮಾಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಇದರಿಂದ ಅವರು ಮನೆಯಲ್ಲಿಯೇ ಐಸೋಲೇಟ್​ ಆಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನ್ಯಾಷನಲ್ಡ್​ ಹೆರಾಲ್ಡ್​ ಹಗರಣ ಕುರಿತಂತೆ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವ ಮೊದಲು ಕೊರೊನಾ ತುತ್ತಾಗಿ ಬಳಿಕ ಚೇತರಿಸಿಕೊಂಡಿದ್ದರು. ಬಳಿಕ ವೈದ್ಯರ ನೇತೃತ್ವದಲ್ಲಿ ಮೂರು ದಿನ ಇಡಿ ವಿಚಾರಣೆ ಎದುರಿಸಿದ್ದರು. ಇದೀಗ ಎರಡನೇ ಬಾರಿಗೆ ಕೊರೊನಾ ತಗುಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದರು.