ಮನೆ ಆರೋಗ್ಯ ಪದೇ ಪದೇ ಗ್ರೀನ್‌ ಟೀ ಕುಡಿದರೆ ಆರೋಗ್ಯಕ್ಕೆ ಹಾನಿಕರ

ಪದೇ ಪದೇ ಗ್ರೀನ್‌ ಟೀ ಕುಡಿದರೆ ಆರೋಗ್ಯಕ್ಕೆ ಹಾನಿಕರ

0

ಆರೋಗ್ಯ ತಜ್ಞರು ಚಹಾ ಕುಡಿಯುವ ಬದಲು ಗ್ರೀನ್ ಟೀ ಕುಡಿಯಿರಿ ಎಂದು ಹೇಳುತ್ತಾರೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಒಂದು ದಿನಕ್ಕೆ ಬಹಳಷ್ಟು ಸಲ ಗ್ರೀನ್ ಟೀ ಕೂಡ ಕುಡಿಯ ಬಾರದು. ಅದು ಕೂಡ ಆರೋಗ್ಯಕ್ಕೆ ಹಲವು ರೀತಿಗಳಲ್ಲಿ ಡೇಂಜರ್. ಹೆಚ್ಚು ಗ್ರೀನ್ ಟೀ ಕುಡಿದರೆ ಏನಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ರಕ್ತದ ಒತ್ತಡ ಏರಿಕೆ

ನೀವು ಪ್ರತಿದಿನ ಕುಡಿಯುವ ಕಾಫಿಗೆ ಹೋಲಿಸಿದರೆ ಗ್ರೀನ್ ಟೀ ತನ್ನಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೆಫಿನ್ ಅಂಶವನ್ನು ಒಳಗೊಂಡಿರುತ್ತದೆ. ಹಾಗೆಂದು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಲು ಹೋದರೆ ಅದು ಹೃದಯಕ್ಕೆ ತೊಂದರೆ ಕೊಡುತ್ತದೆ ಮತ್ತು ರಕ್ತದ ಒತ್ತಡ ಏರಿಕೆಯಾಗುತ್ತದೆ. ಅದರಲ್ಲೂ ಮೊದಲೇ ಹೃದಯದ ತೊಂದರೆ ಇರುವ ಜನರಿಗೆ ಇದು ಮತ್ತಷ್ಟು ತೊಂದರೆ ಆಗಬಹುದು. ಹೀಗಾಗಿ ಇರಲಿ ಎಚ್ಚರ. ಒಂದು ವೇಳೆ ನಿಮಗೆ ಅತಿಯಾದ ರಕ್ತದ ಒತ್ತಡ ಇದ್ದರೆ, ಹೃದಯರಕ್ತನಾಳದ ಸಮಸ್ಯೆ ಇದ್ದರೆ ಅಥವಾ ನೀವು ಯಾವುದಾದರೂ ಮಾರಕವಾದ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಈಗಲೇ ನಿಮ್ಮ ಗ್ರೀನ್ ಟೀ ಸೇವನೆಯನ್ನು ಕಡಿಮೆ ಮಾಡಿ.

ರಕ್ತಹೀನತೆ ಸಮಸ್ಯೆ

ಗ್ರೀನ್ ಟೀ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಾ ಹೋದರೆ, ನಿಮ್ಮ ದೇಹದಿಂದ ಆಹಾರ ಪದಾರ್ಥಗಳಲ್ಲಿ ಕಂಡುಬರುವಂತಹ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಯಾಗುತ್ತದೆ. ಇದು ಕೆಂಪು ರಕ್ತಕಣಗಳ ಕೊರತೆಯನ್ನು ಉಂಟುಮಾಡಬಹುದು. ಇದೇ ಕಾರಣಕ್ಕೆ ಆರೋಗ್ಯ ತಜ್ಞರು ಒಂದು ಕಿವಿ ಮಾತು ಹೇಳಿದ್ದಾರೆ. ಅದೇನಂದರೆ ಊಟ ಆದ ನಂತರದಲ್ಲಿ ಯಾವುದೇ ಕಾರಣಕ್ಕೂ ಗ್ರೀನ್ ಟೀ ಕುಡಿಯಬಾರದು ಎಂದು. ಒಂದು ವೇಳೆ ನಿಮಗೆ ಈಗಾಗಲೇ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇದ್ದರೆ, ನಿಮಗೆ ಆಯಾಸ, ಸುಸ್ತು, ಎದೆ ನೋವು, ಕೈಕಾಲುಗಳು ತಣ್ಣಗಾಗುವುದು, ಉಸಿರಾಟದ ತೊಂದರೆ ಅಥವಾ ಅತಿಯಾದ ಹೃದಯ ಬಡಿತ ಕಂಡುಬರುವ ಸಾಧ್ಯತೆ ಇರುತ್ತದೆ.

ನಿದ್ರೆಯ ಸಮಸ್ಯೆ

ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್ ಟೀ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಕೆಫಿನ್ ಅಂಶ ಹೆಚ್ಚಾಗುತ್ತ ಹೋಗುತ್ತದೆ. ಇದು ನಿಮಗೆ ರಾತ್ರಿಗೆ ಸಮಯದಲ್ಲಿ ನಿದ್ರೆ ಬರದಂತೆ ಮಾಡಬಹುದು ಮತ್ತು ಬೆಳಗಿನ ಸಮಯದಲ್ಲಿ ಅತಿಯಾದ ಆಯಾಸ ಮತ್ತು ಸುಸ್ತು ಕಂಡುಬರುವಂತೆ ಮಾಡಬಹುದು. ದಿನನಿತ್ಯದ ನಿಮ್ಮ ಕಾರ್ಯಚಟುವಟಿಕೆಗಳನ್ನು ನಿಮಗೆ ಮಾಡಿಕೊಳ್ಳಲು ಕಷ್ಟವಾಗುವಂತೆ ಇದರಿಂದ ಆಗುತ್ತದೆ. ಹೀಗಾಗಿ ಇರಲಿ ಎಚ್ಚರ.

ಮಾನಸಿಕ ಒತ್ತಡ ಮತ್ತು ಖಿನ್ನತೆ ಹೆಚ್ಚಾಗುತ್ತದೆ

ದಿನಕ್ಕೆ ಒಂದು ಕಪ್ ಗ್ರೀನ್ ಟೀ ಕುಡಿದರೆ ನಿಮ್ಮ ಮನಸ್ಸಿಗೆ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳು ತ್ತಾರೆ. ಆದರೆ ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡು ಪದೇಪದೇ ಗ್ರೀನ್ ಟೀ ಕುಡಿಯುತ್ತಾ ಹೋದರೆ ಅದರಿಂದ ತೊಂದರೆ ಹೆಚ್ಚಾಗುತ್ತದೆ. ಏಕೆಂದರೆ ಅತಿಯಾದ ಕೆಫೀನ್ ಅಂಶ ನಿಮ್ಮ ರಕ್ತದಲ್ಲಿ ಅಡ್ರಿನಲ್ ಗ್ರಂಥಿಗಳಲ್ಲಿ ತೊಂದರೆ ಉಂಟು ಮಾಡುತ್ತದೆ. ಮಾನಸಿಕ ಒತ್ತಡ ಹೆಚ್ಚಾಗುವಂತಹ ಕಾರ್ಟಿಸೋಲ್ ಎಂಬ ಹಾರ್ಮೋನು ಉತ್ಪತ್ತಿ ಹೆಚ್ಚು ಮಾಡುತ್ತದೆ.

ಹೊಟ್ಟೆ ಕೆಟ್ಟು ಹೋಗುವುದು

ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್ ಟೀ ಸೇವನೆ ಮಾಡುವುದರಿಂದ ದೇಹಕ್ಕೆ ಟ್ಯಾನಿನ್ ಎಂಬ ಅಂಶ ಸೇರುತ್ತಾ ಹೋಗುತ್ತದೆ. ಇದು ಅಂಗಾಂಶಗಳನ್ನು ಕುಗ್ಗಿಸುತ್ತದೆ. ಬಾಯಿ ಒಣಗುವುದು, ವಾಕರಿಕೆ ಬಂದಂತೆ ಆಗುವುದು ಮತ್ತು ಹೊಟ್ಟೆ ಕೆಟ್ಟು ಹೋಗುವುದು ಆಗುತ್ತದೆ. ಬಗ್ಗೆ ಒಂದು ವೇಳೆ ಈಗಾಗಲೇ ವಾಂತಿ ಮತ್ತು ಭೇದಿ ಸಮಸ್ಯೆ ಇದ್ದರೆ, ಗ್ರೀನ್ ಟೀ ಕುಡಿಯಬೇಡಿ. ಏಕೆಂದರೆ ಇದು ನಿಮ್ಮ ದೇಹದಲ್ಲಿ ಮತ್ತಷ್ಟು ನಿರ್ಜಲೀಕರಣ ಸಮಸ್ಯೆಯನ್ನು ಉಂಟುಮಾಡುತ್ತದೆ ಮತ್ತು ಅದರಿಂದ ನಿಮ್ಮ ಕಿಡ್ನಿಗಳಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ.