ಮನೆ ಸುದ್ದಿ ಜಾಲ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ: ಇಬ್ಬರು ಹಿರಿಯ ಪತ್ರಕರ್ತರಿಗೆ ಎಂಡಿಜೆಎ ಸನ್ಮಾನ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ: ಇಬ್ಬರು ಹಿರಿಯ ಪತ್ರಕರ್ತರಿಗೆ ಎಂಡಿಜೆಎ ಸನ್ಮಾನ

0

ಮೈಸೂರು (Mysuru): 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಬ್ಬರು ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಲ್ಕು ದಶಕಗಳಿಂದ ಅಫ್ತಾಬ್-ಇ-ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ರಹಮತ್ ಉಲ್ಲಾಖಾನ್ ಹಾಗೂ ಆಕಾಶವಾಣಿ ವಾಹಿನಿಗೆ ಕಳೆದ ಐದು ದಶಕಗಳ ಸೇವೆ ಸಲ್ಲಿಸಿ ಹುಣಸೂರಿನ ಕಲ್ಕುಣಿಕೆ ಬಡಾವಣೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಕೆ.ವಿ.ಶ್ರೀನಿವಾಸನ್ (ಬ್ರದರ್) ಅವರನ್ನು ಇಂದು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿ ಅವರ ಅನುಪಮ ಸೇವೆಯನ್ನು ಸ್ಮರಿಸಲಾಯಿತು.

ರಹಮತ್ ಉಲ್ಲಾಖಾನ್ ಅವರಿಗೆ ಎಂಡಿಜೆಎ ಸನ್ಮಾನಿಸುವ ಸಂದರ್ಭದಲ್ಲಿ ಮಾಜಿ ಮೇಯರ್ ಆರಿಫ್ ಹುಸೇನ್ ಅವರು 5 ಸಾವಿರ ರೂ. ವೈಯಕ್ತಿಕ ನೆರವು ನೀಡಿ ಔದಾರ್ಯ ಮೆರೆದರು. ಎಂಡಿಜೆಯ ಸನ್ಮಾನ ಸ್ವೀಕರಿಸಿದ ಇಬ್ಬರೂ ಹಿರಿಯ ಪತ್ರಕರ್ತರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡಿದೆ ಎಂದು ಪ್ರಶಂಸಿಸಿದರು.

ರಹಮತ್ ಉಲ್ಲಾಖಾನ್ ಅವರನ್ನು ಗೌರಿವಿಸುವ ಸಂದರ್ಭ ಎಂಡಿಜೆಎ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ. ರಾಘವೇಂದ್ರ, ಉರ್ದು ಪತ್ರಿಕೆ ವರದಿಗಾರ ಅಫ್ಸರ್ ಪಾಷಾ, ನಯೀಮುಲ್ಲಾ, ಕೈಸರ್ ಅಹಮದ್ ಹಾಗೂ ಮಾಜಿ ಮೇಯರ್ ಆರಿಫ್ ಹುಸೇನ್ ಹಾಜರಿದ್ದರು.

ಕೆ.ವಿ. ಶ್ರೀನಿವಾಸನ್ (ಬ್ರದರ್) ಅವರನ್ನು ಗೌರವಿಸುವ ಸಂದರ್ಭ ಎಂಡಿಜೆಎ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ. ರಾಘವೇಂದ್ರ, ಹುಣಸೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಪತ್ರಕರ್ತರಾದ ಹನಗೋಡು ನಟರಾಜ್,  ಗಜೇಂದ್ರ, ಸಂಪತ್ ಕುಮಾರ್, ಪ್ರತಾಪ್, ವಡ್ಡಂಬಾಳು ರವಿ ಇತರರು ಹಾಜರಿದ್ದರು.