ಮನೆ ರಾಜ್ಯ ಮೈಸೂರು: ಮೂರು ಪಕ್ಷಗಳ ಪ್ರಣಾಳಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ರೈತರು

ಮೈಸೂರು: ಮೂರು ಪಕ್ಷಗಳ ಪ್ರಣಾಳಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ರೈತರು

0

ಮೈಸೂರು: ರೈತ ಪ್ರಣಾಳಿಕೆ ಬಗ್ಗೆ ಪಲಾಯನವಾದ ಮಾಡಿದ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಪ್ರತಿಯನ್ನು ಸುಟ್ಟು ರೈತರು ಆಕ್ರೋಶ ವ್ಯಕ್ತಪಡಿಸಿದರು.

Join Our Whatsapp Group

ನಗರದ ಗನ್‌’ಹೌಸ್ ಸಮೀಪ ಇರುವ ಕುವೆಂಪು ಉದ್ಯಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ರೈತ ಮತದಾರರಿದ್ದಾರೆ, ರೈತರ ವೋಟು ಕೇಳುವ ರಾಜಕೀಯ ಪಕ್ಷಗಳು, ರೈತ ಸಮಸ್ಯೆಗಳ ಪ್ರಣಾಳಿಕೆ ಬಗ್ಗೆ ಯಾಕೆ ಬದ್ಧತೆ ತೋರದೇ ಪಲಾಯನವಾದ ಮಾಡಿದ್ದಾರೆ ಎಂದು ಕಿಡಿಕಾರಿದರು.

ಒಂದೂವರೆ ತಿಂಗಳ ಹಿಂದೆ ಪ್ರಣಾಳಿಕೆ ಬಿಡುಗಡೆ ಮಾಡಿ ರಾಜಕೀಯ ಪಕ್ಷಗಳ ಬದ್ಧತೆ ಬಗ್ಗೆ ಕಾಲಾವಕಾಶ ನೀಡಿದರು, ಯಾವ ಪಕ್ಷದವರು ಬದ್ಧತೆ ತೋರಲಿಲ್ಲ. ಈ ಬಗ್ಗೆ ರಾಜ್ಯಾದ್ಯಂತ ರೈತ ಮುಖಂಡರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಚುನಾವಣಾ ಪ್ರಚಾರದಲ್ಲಿ ಸಿನಿಮಾ ನಟರ ರಂಜನೀಯ ಮಾತಿಗೆ ಮರುಳಾಗಬೇಡಿ ಮತದಾನ ಎಂಬುದು ಮನೆ ಮಗಳ ಮದುವೆ ಮಾಡಿದಂತೆ ಉತ್ತಮ ವರನನ್ನ ಹುಡುಕುವ ರೀತಿ ಉತ್ತಮರಿಗೆ ಮತ ನೀಡಿ ಬೆಂಬಲಿಸಿ ಎಂದು ಸಲಹೆ ನೀಡಲಾಯಿತು.

ಪ್ರಜಾಪ್ರಭುತ್ವದ ಹೆಸರಿನಲ್ಲಿ ಕ್ರಿಮಿನಲ್​​ಗಳು, ಗೂಂಡಗಳು, ಗಡಿಪಾರಾದವರು ಭೂ-ಮಾಫಿಯ, ಅಬಕಾರಿ, ಶಿಕ್ಷಣ ಮಾಫಿಯಾದವರು ಅಧಿಕಾರ ಹಿಡಿಯಲು ಬಂಡವಾಳ ಹೂಡುತ್ತಿದ್ದಾರೆ. ಅಧಿಕಾರಕ್ಕೆ ಬಂದು ಕೊಳ್ಳೆಹೊಡೆಯಲು ಮುಂದಾಗುತ್ತಾರೆ. ಈ ರೈತ ಸಂಘಟನೆಗಳು ಇಂತಹವರ ಬಗ್ಗೆ ಮೋಸ ಹೋಗದೇ, ರೈತರ ಪರ ಕಾಳಜಿ ಇರುವ ವ್ಯಕ್ತಿಗಳಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಕರ್ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತೇವೆ, ಯಾವುದೇ ಸುಳ್ಳು ಪೊಳ್ಳು ಭರವಸೆಗಳನ್ನು ಕೊಡುವುದಿಲ್ಲ ಎನ್ನುವ ರಾಜಕೀಯ ಪಕ್ಷಗಳು ಬೋಗಸ್ ಪ್ರಣಾಳಿಕೆಗಳನ್ನು ಹೊರಡಿಸಿ ಜನರನ್ನ ರೈತರನ್ನ ಹಾಳು ಬಾವಿಗೆ ತಳ್ಳುತ್ತಿದ್ದಾರೆ. ರೈತ ಪ್ರಣಾಣಿಕೆ ಬಗ್ಗೆ ಯಾಕೆ ಬದ್ಧತೆ ತೋರುತ್ತಿಲ್ಲ. ರಾಜ್ಯದ ರೈತರು ಮನಸ್ಸು ಮಾಡಿದರೆ ಸರಕಾರಗಳನ್ನು ಬುಡಮೇಲು ಮಾಡುತ್ತಾರೆ. ದೇಶದ ರೈತರು ಯಾರ ಗುಲಾಮರು ಅಲ್ಲ ಎಂದರು.

ರೈತರ ಚುನಾವಣಾ ಪ್ರಣಾಳಿಕೆಗಳು:

ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಶಾಸನ ಜಾರಿ, ಡಾ.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಹಗಲು ರಾತ್ರಿ ದುಡಿಯುವ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ. ಹಗಲು ವೇಳೆಯಲ್ಲಿ ಕೃಷಿ ಪಂಪಸೆಟ್’​​​ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡುವ ಭರವಸೆ. ದೇಶದ ಉದ್ಯಮಿಗಳಿಗೆ 10 ಲಕ್ಷ ಕೋಟಿ ಸಾಲಮನ್ನಾ ಮಾಡಿದ ರೀತಿಯಲ್ಲಿಯೇ ಅತಿವೃಷ್ಟಿ, ಬೆಳೆ ಹಾನಿ ಸಂಕಷ್ಟದಿಂದ ತತ್ತರಿಸಿರುವ ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಆಗಬೇಕು, ಕೃಷಿ ಸಾಲ ನೀತಿ ಬದಲಾಗಬೇಕು. ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳಿಗೆ ಪ್ರತ್ಯೇಕ ಮಾರುಕಟ್ಟೆ , ಪ್ರತ್ಯೇಕ ಹೆಚ್ಚುವರಿ ಧರ ನಿಗದಿ ಯೋಜನೆ ಜಾರಿಗೆ ಬರಬೇಕು. ಬಂಡವಾಳಶಾಹಿ ಕಂಪನಿಗಳು ಚಿಲ್ಲರೆ ಮಾರಾಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು, ಈ ಕಂಪನಿಗಳ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ನಿಷೇಧ ಹೇರಬೇಕು ಎಂಬ ವಿಷಯಗಳ ಜೊತೆಗೆ ಹಲವು ರೈತ ಪರ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವೈ ಬಿ ಇನ್ಮತಿ ರಾಜ್ಯ ಸಂಚಾಲಕ ಕನಕ೦ಚೇನಹಳ್ಳಿ ಪ್ರಸನ್ನ ಕುಮಾರ್, ಆಯುಬ್ ಪಾಶ, ರಾಜ್ಯ ಕಬ್ಬು ಬೆಳೆಗಾರ ಸಂಘದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ, ಪಿ ಸೋಮಶೇಖರ್, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಜಿಲ್ಲಾ ಮಹಿಳಾ ಸಂಘಟನೆ ಅಧ್ಯಕ್ಷರಾದ ಕಮಲಮ್ಮ, ಮಂಜುನಾಥ ಇದ್ದರು.

ಹಿಂದಿನ ಲೇಖನಗ್ಯಾಸ್ಟ್ರಿಕ್’ಗೆ ಸಿಂಪಲ್ ಮನೆಮದ್ದುಗಳು
ಮುಂದಿನ ಲೇಖನಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ತಡೆಯಾಜ್ಞೆ ನೀಡುವ ಅಧಿಕಾರವಿಲ್ಲ: ಮದ್ರಾಸ್ ಹೈಕೋರ್ಟ್