ಬೆಳಗಾವಿ(Belagavi): ಪತ್ನಿಯ ಶೀಲ ಶಂಕಿಸಿದ ಪತಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಘಟನೆ ಗುರುವಾರದಂದು ಸವದತ್ತಿಯಲ್ಲಿ ನಡೆದಿದೆ.
ಶಬಾನಾ ಗೊರವನಕೊಳ್ಳ (28) ಕೊಲೆಯಾದವರು. ಮೆಹಬೂಬಸಾಬ್ ಗರೀಬ್‌ಸಾಬ್ ಗೊರವನಕೊಳ್ಳ ಆರೋಪಿ.
ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದ ಕಾರಣ ದಂಪತಿ ಮಧ್ಯೆ ಪದೇಪದೇ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು ಶಬಾನಾ ಅವರು ಪತಿಯಿಂದ ದೂರವಾಗಿ ತಮ್ಮ ಮಗಳೊಂದಿಗೆ ಬೇರೆ ಮನೆ ಮಾಡಿದ್ದರು. ಗುರುವಾರ ಬೆಳಿಗ್ಗೆ ಅಲ್ಲಿಗೇ ಬಂದ ಆರೋಪಿ ಹರಿತವಾದ ಆಯುಧದಿಂದ ಇರಿದು ಶಬಾನಾ ಅವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.














