ಮನೆ ಅಪರಾಧ ಪತ್ನಿ ಶೀಲ ಶಂಕಿಸಿ ಪತಿಯಿಂದಲೇ ಹತ್ಯೆ

ಪತ್ನಿ ಶೀಲ ಶಂಕಿಸಿ ಪತಿಯಿಂದಲೇ ಹತ್ಯೆ

0

ಬೆಳಗಾವಿ(Belagavi): ಪತ್ನಿಯ ಶೀಲ ಶಂಕಿಸಿದ ಪತಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಘಟನೆ ಗುರುವಾರದಂದು ಸವದತ್ತಿಯಲ್ಲಿ ನಡೆದಿದೆ.

ಶಬಾನಾ ಗೊರವನಕೊಳ್ಳ (28) ಕೊಲೆಯಾದವರು. ಮೆಹಬೂಬಸಾಬ್ ಗರೀಬ್‌ಸಾಬ್ ಗೊರವನಕೊಳ್ಳ ಆರೋಪಿ.

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದ ಕಾರಣ ದಂಪತಿ ಮಧ್ಯೆ ಪದೇಪದೇ ಜಗಳ  ನಡೆಯುತ್ತಿತ್ತು. ಇದರಿಂದ ಬೇಸತ್ತು ಶಬಾನಾ ಅವರು ಪತಿಯಿಂದ ದೂರವಾಗಿ ತಮ್ಮ ಮಗಳೊಂದಿಗೆ ಬೇರೆ ಮನೆ ಮಾಡಿದ್ದರು. ಗುರುವಾರ ಬೆಳಿಗ್ಗೆ ಅಲ್ಲಿಗೇ ಬಂದ ಆರೋಪಿ ಹರಿತವಾದ ಆಯುಧದಿಂದ ಇರಿದು ಶಬಾನಾ ಅವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಬಿಎಸ್’ವೈಗೆ ಸ್ಥಾನಮಾನ: ಎಂ.ಬಿ.ಪಾಟೀಲ್
ಮುಂದಿನ ಲೇಖನಆಧಾರರಹಿತ ವಾಗ್ದಾನ ನೀಡಬೇಡಿ: ರಾಮ್‌ದೇವ್‌ಗೆ ದೆಹಲಿ ಹೈಕೋರ್ಟ್ ಸೂಚನೆ