ಮನೆ ಅಪರಾಧ ಐಟಿಬಿಪಿ ಕ್ಯಾಂಪಿನಿಂದ  ಎರಡು ಎಕೆ-47 ರೈಫಲ್ ಕಳವು

ಐಟಿಬಿಪಿ ಕ್ಯಾಂಪಿನಿಂದ  ಎರಡು ಎಕೆ-47 ರೈಫಲ್ ಕಳವು

0

ಬೆಳಗಾವಿ(Belagavi): ತಾಲೂಕಿನ ಹಾಲಭಾವಿಯ ಐಟಿಬಿಪಿ ಕ್ಯಾಂಪಿನಲ್ಲಿ ಇಂಡೋ ಟಿಬೆಟಿಯನ್ ಗಡಿ ಪೊಲೀಸರಿಗೆ ಸೇರಿದ ಎರಡು AK 47 ರೈಫಲ್​ ಕಳ್ಳತನವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಬಿಗಿ ಪೊಲೀಸ್ ಭದ್ರತೆ ನಡುವೆಯೂ ಇಂಡೋ ಟಿಬೆಟಿಯನ್ ಗಡಿ ಪೊಲೀಸರಾದ ರಾಜೇಶಕುಮಾರ, ಸಂದೀಪ ಮೀನಾ ಎಂಬುವವರಿಗೆ ಸೇರಿದ ಎರಡು ಎಕೆ – 47 ಆ.17ರ ರಾತ್ರಿ ಕಳುವಾಗಿವೆ. ನಕ್ಸಲ್ ನಿಗ್ರಹ ತರಬೇತಿಗಾಗಿ ಮಧುರೈನ 45ನೇ ಬೆಟಾಲಿಯನ್ ಪೊಲೀಸ್ ಪಡೆಯು ಹಾಲಭಾವಿಗೆ ಆಗಮಿಸಿತ್ತು.

ವಿಷಯ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡಸಿದ್ದಾರೆ. ಸುತ್ತಲೂ ಬಿಗಿ ಭದ್ರತೆ ಸರ್ಪಗಾವಲು ಇದ್ದರೂ ಒಳನುಗ್ಗಿ ಅತ್ಯಾಧುನಿಕ ಶಸ್ತ್ರಾಸ್ತ್ರ ಎಗರಿಸಿ ಪರಾರಿಯಾಗಿರುವುದು ಆತಂಕ ಮೂಡಿಸಿದೆ.

ಸದ್ಯ ಬೆಳಗಾವಿ ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ಶೋಧಕಾರ್ಯ ನಡೆಸುತ್ತಿದೆ. ಕಳೆದ 24ಗಂಟೆಗಳಿಂದಲೂ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ಐಟಿಬಿಪಿಯಿಂದ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.