ಮನೆ ಕೃಷಿ ರೈತರು ರಫ್ತುದಾರರಾಗಲು  ಎಕ್ಸ್ಪೋರ್ಟ್ ಲ್ಯಾಬ್: ಬಿ.ಸಿ.ಪಾಟೀಲ್

ರೈತರು ರಫ್ತುದಾರರಾಗಲು  ಎಕ್ಸ್ಪೋರ್ಟ್ ಲ್ಯಾಬ್: ಬಿ.ಸಿ.ಪಾಟೀಲ್

0

ಬೆಂಗಳೂರು(Bengaluru): ರೈತರನ್ನು ರೈತ ರಫ್ತುದಾರರನ್ನಾಗಿ ಮಾಡಿ ರೈತ ಶಕ್ತಿಶಾಲಿಯಾಗಿ ಲಾಭವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೈತರು ರಫ್ತುದಾರರಾಗಲು ಎಕ್ಸ್ಪೋರ್ಟ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಸಮಾವೇಶಕ್ಕೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಐದು ರೈತರ ಎಕ್ಸ್ಪೋರ್ಟ್ ಲ್ಯಾಬ್‌ಗಳನ್ನು  ಗುರುತಿಸಲಾಗಿದೆ. ಇಂಡಿ ಹನುಮನಮಟ್ಟಿ ನಾಗೇನಹಳ್ಳಿ ವರದಗೇರಾ ಬನವಾಸಿಗಳಲ್ಲಿ ರಫ್ತುದಾರರ ಲ್ಯಾಬ್ ಆರಂಭಿಸಲು ಗುರುತಿಸಲಾಗಿದೆ ಎಂದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಪ್ರೊಸೆಸ್ ಇಂಡಸ್ಟ್ರಿಯಿಂದ ರೈತ ಲಾಭ ಹೊಂದಬೇಕು. ಅಪೆಡಾದ ಡಿಜಿಎಂ ನಮ್ಮ ಕರ್ನಾಟಕದವರೇ ಇದ್ದಾರೆ. ಬಾಂಬೆಯಲ್ಲಿ ರಫ್ತುದಾರರನ್ನು ನೋಡಿ ನಮ್ಮಲ್ಲಿಯೂ ರೈತರ್ಯಾಕೆ ರಫ್ತುದಾರರಾಗಬಾರದೆಂದು ಚಿಂತನೆ ನಡೆಸಲಾಯಿತು. ಎಕ್ಸ್ಪೋರ್ಟ್ ಮಾಡಲು ಫುಡ್ ಯುನಿಟ್‌ಗಳನ್ನು ಬಳಸಿಕೊಳ್ಳಬೇಕು ಎಂದರು.

ಜನಸಂಖ್ಯೆ ಹೆಚ್ಚಿದಂತೆ ಅನ್ನ ಉಣ್ಣುವವರ ಸಂಖ್ಯೆಯೂ ಹೆಚ್ಚಿದೆ.ಜನಸಂಖ್ಯೆ ಹೆಚ್ಚಿದಂತೆ ಅನ್ನ ಕೊಡುವ ತಾಕತ್ತು ಕೊಡುವ ಶಕ್ತಿಯೂ ನಮ್ಮ ರೈತರದ್ದು ಹೆಚ್ಚಿದೆ.ಅಂಬಾನಿಯಂತವರಿಂದ ಅನ್ನ ಕೊಡಲು ಸಾಧ್ಯವಿಲ್ಲ. ಅನ್ನಕೊಡುವ ಶಕ್ತಿ ಇರುವುದು ನಮ್ಮ ರೈತ ಅನ್ನದಾತನದ್ದು ಇದು ರೈತರ ಹೆಮ್ಮೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಳ್ಳದಕಾಯಕವೆಂದರೆ ಕೃಷಿ.ಕಾಯಕ ಯೋಗಿ ಎಂದರೆ ರೈತ. ಕೃಷಿ ಇಲಾಖೆ ಕೆಪೆಕ್ ಸ್ಥಾಪಿಸುವ ಮೂಲಕ ರೈತ ತನ್ನ ಬೆಳೆಯನ್ನು ಹಳ್ಳಿಯಲ್ಲ ದಿಲ್ಲಿ ವಿದೇಶಕ್ಕೂ ಮಾರುವಂತಾಗಬೇಕು. ರೈತರೇ ತಮ್ಮ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್  ಮಾಡುವಂತಾಗಬೇಕು. ನಮ್ಮ ರೈತ ರಫ್ತುದಾರ ಉದ್ಯಮಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರೈತ ಇನ್ನೊಬ್ಬರಿಗೆ ಪರಾವಲಂಭನೆಯಾಗದೇ ತಾನೇ ವೈಜ್ಞಾನಿಕ ಬೆಲೆ‌ ಪಡೆಯುವಂತಾಗಬೇಕು. ಸೃಷ್ಟಿಸುವಂತಾಗಬೇಕು. ಸಾಮಾನ್ಯ ರೈತ ಸ್ವಾವಲಂಬಿಯಾಗಬೇಕು.ರೈತ ಮತ್ತು ರಫ್ತುದಾರರ ಮಧ್ಯೆ ಸೇತುವೆಯಂತೆ ಕೊಂಡಿ ಜೋಡಿಸುವ ಕೆಲಸ ಕೆಪೆಕ್ ಮಾಡುತ್ತಿದೆ ಎಂದು ಬಿ.ಸಿ.ಪಾಟೀಲರು ವಿವರಿಸಿದರು.

ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್, ಕೃಷಿ ಆಯುಕ್ತರಾದ ಶರತ್ ಕುಮಾರ್, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ,ಜಿಕೆವಿಕೆ ಉಪಕುಲಪತಿ ಡಾ.ರಾಜೇಂದ್ರ ಪ್ರಸಾದ್,ತೋಟಗಾರಿಕಾ ನಿರ್ದೇಶಕ ನಾಗೇಂದ್ರ ಪ್ರಸಾದ್,ಕೃಷಿ ಇಲಾಖೆ‌ನಿರ್ದೇಶಕಿ ನಂದಿನಿಕುಮಾರಿ,ಕೆಪೆಕ್ ಸಂಸ್ಥೆ ನಬಾರ್ಡ್ನ ಪ್ರಮುಖರು ಅಂತರಗಂಗೆ ಇಲಾಖೆ ನಿರ್ದೇಶಕರು, ಕೃಷಿ ಇಲಾಖೆಯ ಅಪರ ಕೃಷಿನಿರ್ದೇಶಕರು ಸೇರಿದಂತೆ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.