ಬೆಂಗಳೂರು: ಶಿಕ್ಷಣ ಬೇಕಾದರೇ ಸಮವಸ್ತ್ರ ಧರಿಸಿ ತರಗತಿಗೆ ಬರಲಿ. ವಸ್ತ್ರಸಂಹಿತೆ ಉಲ್ಲಂಘಿಸಿದರೇ ಕಾಲೇಜಿಗೆ ಪ್ರವೇಶ ಇಲ್ಲವೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಿಕ್ಷಣ ಬಿ.ಸಿ ನಾಗೇಶ್, ಶಿಕ್ಷಣ ಬೇಕಾದ ಮಕ್ಕಳು ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಧರ್ಮ ಪಾಲನೆ ಮಾಡುವುದಕ್ಕೆ ನಾವು ವಿರೋಧಿಸಿಲ್ಲ. ಶಿಕ್ಷಣ ಬೇಕಾದರೇ ಅಲ್ಲಿನ ನಿಯಮದಂತೆ ಬರಬೇಕು, ಹೈಕೋರ್ಟ್ ತೀರ್ಪು ಆಧರಿಸಿ ಹೊಸ ನಿಯಮ ಮಾಡುತ್ತೇವೆ. ಅಲ್ಲಿಯವರೆಗೆ ಈಗಿರುವ ನಿಯಮವೇ ಮುಂದುರೆಯಲಿದೆ ಎಂದರು.
ದೇಶದ ಸಮಗ್ರತೆ ಹಾಳು ಮಾಡಲು ಪಿತೂರಿ ನಡೆಯುತ್ತಿದೆ. ಹಿಜಾಬ್ ವಿವಾದ ಬಳಸಿ ಘರ್ಷಣೆ ಸೃಷ್ಠಿಸುವ ಹುನ್ನಾರವಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಬಿಸಿ ನಾಗೇಶ್, ಮಾಜಿ ಸಿಎಂ ಆಗಿ ಇಂಥ ಮಾತನಾಡಲು ಸಿದ್ಧರಾಮಯ್ಯಗೆ ನಾಚಿಕೆಯಾಗಬೇಕು. ವೋಟ್ ಗಾಗಿ ಇವರು ಯಾವ ಮಟ್ಟಕ್ಕೂ ಬೇಕಾದರೂ ಹೋಗುತ್ತಾರೆ. ಒಂದು ಸಮುದಾಯದ ಮತಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಅವರ ಅವಧಿಯಲ್ಲೇ ಈ ಸಮವಸ್ತ್ರ ನಿಯಮ ಮಾಡಿದ್ದಾರೆ ಎಂದು ತಿಳಿಸಿದರು.