ಮನೆ ಅಪರಾಧ ಕಾರಿನ ಬ್ರೇಕ್ ಪೆಡಲ್‌ಗೆ ನೀರಿನ ಬಾಟಲಿ ಸಿಲುಕಿ ಅಪಘಾತ

ಕಾರಿನ ಬ್ರೇಕ್ ಪೆಡಲ್‌ಗೆ ನೀರಿನ ಬಾಟಲಿ ಸಿಲುಕಿ ಅಪಘಾತ

0

ಮಂಗಳೂರು:  ಇಳಿಜಾರಿನಲ್ಲಿ ಬ್ರೇಕ್ ಪೆಡಲ್ ಗೆ ನೀರಿನ ಬಾಟಲಿ ಸಿಲುಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಯದ್ವಾತದ್ವಾ ಚಲಿಸಿ ಎರಡು ದ್ವಿಚಕ್ರ ವಾಹನ, ಎರಡು ಕಾರುಗಳಿಗೆ ಡಿಕ್ಕಿಯಾದ ಘಟನೆ ನಗರದ ಉರ್ವಾ ಚಿಲಿಂಬಿ-ಕೋಟೆಕಣಿ ರಸ್ತೆಯಲ್ಲಿ ನಡೆಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಗರದ ನಿವಾಸಿ ವಿವೇಕಾನಂದ ಶೆಣೈ (63) ಎಂಬವರು ಕಾರು ಚಲಾಯಿಸುತ್ತಿದ್ದರು. ಇವರು ಕೋಟೆಕಣಿ ರಸ್ತೆಯಿಂದ ಉರ್ವಾಕ್ಕೆ ಬರುತ್ತಿದ್ದಾಗ ಇಳಿಜಾರಿನಲ್ಲಿ ಬ್ರೇಕ್ ಪೆಡಲ್‌ಗೆ ನೀರಿನ ಬಾಟಲಿ ಸಿಲುಕಿದ ಪರಿಣಾಮ ವಾಹನ ಚಾಲಕ ನಿಯಂತ್ರಣ ತಪ್ಪಿದೆ. ವೇಗವಾಗಿ ಚಲಿಸಿದ ಕಾರು ಲೇಡಿಹಿಲ್‌ನಿಂದ ಉರ್ವಾಸ್ಟೋರ್ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಇಬ್ಬರು ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಆನಂತರವೂ ಕಾರು ಚಾಲಕನ ನಿಯಂತ್ರಣ ಸಿಗದೆ ಮತ್ತೆರಡು ಕಾರುಗಳಿಗೆ ಡಿಕ್ಕಿಯಾಗಿದೆ. ಗಾಯಗೊಂಡ ದ್ವಿಚಕ್ರ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ನಗರದ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಸಿಡಿ ಪ್ರಕರಣ: ಎಸ್ಐಟಿಯಿಂದ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್
ಮುಂದಿನ ಲೇಖನಶಿಕ್ಷಣ ಬೇಕಾದರೇ ಸಮವಸ್ತ್ರ ಧರಿಸಿ ತರಗತಿಗೆ ಬರಲಿ:  ಸಚಿವ ಬಿ.ಸಿ ನಾಗೇಶ್