ಹಾಸನ (Hassan): ನಟ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಪುತ್ರ ಆವ್ಯನ್ ಗೆ ಇಂದು ಮೊದಲ ಮುಡಿ ಶಾಸ್ತ್ರ ನೆರವೇರಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಯಲಿಯೂರು ಲಕ್ಷ್ಮಿ ದೇವಾಲಯಕ್ಕೆ ಪತ್ನಿ ರೇವತಿಯೊಂದಿಗೆ ತೆರಳಿ ಮುಡಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಲಕ್ಷ್ಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ಹೊಳೆನರಸೀಪುರ ತಾಲ್ಲೂಕಿನ ಹರದಹಳ್ಳಿಯ ದೇವೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಸ್ವ ಗ್ರಾಮವಾದ ಹರದನಹಳ್ಳಿಯಲ್ಲಿರುವ ಮನೆ ದೇವರು ದೇವೇಶ್ವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೊಮ್ಮಗನ ಮೊದಲ ಮುಡಿ ಶಾಸ್ತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು.














