ಮನೆ ರಾಜಕೀಯ ಉತ್ಪಾದನಾ ಕ್ಷೇತ್ರ, ಮೇಕ್ ಇನ್ ಇಂಡಿಯಾ ಅಗತ್ಯ ಇದೆ: ಪ್ರಧಾನಿ ಮೋದಿ

ಉತ್ಪಾದನಾ ಕ್ಷೇತ್ರ, ಮೇಕ್ ಇನ್ ಇಂಡಿಯಾ ಅಗತ್ಯ ಇದೆ: ಪ್ರಧಾನಿ ಮೋದಿ

0

ಮಂಗಳೂರು(Mangalore): ಉತ್ಪಾದನಾ ಕ್ಷೇತ್ರ, ಮೇಕ್ ಇನ್ ಇಂಡಿಯಾ ಅಗತ್ಯ ಇದೆ. ಕೊಚ್ಚಿಯಲ್ಲಿ ಸ್ವದೇಶಿ ಏರ್ ಕ್ರಾಫ್ಟ್ ಲೋಕಾರ್ಪಣೆಗೊಂಡಿರುವುದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಆಯೋಜನೆಗೊಂಡ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರಿನಲ್ಲಿ ₹ 3800 ಕೋಟಿ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ, ಭೂಮಿಪೂಜೆ ಆಗಿದೆ. ಕರ್ನಾಟಕದಲ್ಲಿ ವ್ಯಾಪಾರ, ಉದ್ಯೋಗ ಸಾಮರ್ಥ್ಯ ಹೆಚ್ಚಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಕರ್ನಾಟಕದ ರೈತರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿದೆ.

ಎಂಟು ವರ್ಷಗಳಲ್ಲಿ ದೇಶದ ಮೂಲಸೌಕರ್ಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಭಾರತಮಾಲಾ ಯೋಜನೆಯಲ್ಲಿ ರಸ್ತೆ ನಿರ್ಮಾಣ, ಕರಾವಳಿ ಮೂಲ ಸೌಕರ್ಯಕ್ಕೆ ಸಾಗರಮಾಲಾ ಶಕ್ತಿ ನೀಡಿದೆ. ದೇಶದ ಬಂದರುಗಳ ಸಾಮರ್ಥ್ಯ ದ್ವಿಗುಣಗೊಂಡಿದೆ ಎಂದು ವಿವರಿಸಿದರು.