ಮನೆ ರಾಜ್ಯ ಬೆಂಗಳೂರು: ಕೆಲಸ ಅರಸಿ ಬಂದಿದ್ದ ಯುವಕ ಕಟ್ಟಡದ ಐದನೇ‌ ಮಹಡಿಯಿಂದ ಜಿಗಿದು ಸಾವು

ಬೆಂಗಳೂರು: ಕೆಲಸ ಅರಸಿ ಬಂದಿದ್ದ ಯುವಕ ಕಟ್ಟಡದ ಐದನೇ‌ ಮಹಡಿಯಿಂದ ಜಿಗಿದು ಸಾವು

0

ಬೆಂಗಳೂರು: ಕೆಲಸ ಅರಸಿ ನಗರಕ್ಕೆ‌ ಬಂದ ಒಂದೇ ದಿನದಲ್ಲಿ ಯುವಕನೋರ್ವ ಪಿ.ಜಿ. ಕಟ್ಟಡದ ಐದನೇ‌ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

Join Our Whatsapp Group

ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದ ಪಿ.ಜಿ. ಯೊಂದರಲ್ಲಿ ವಾಸ್ತವ್ಯ ಹೂಡಿದ್ದ ಅರುಣ್ ಕುಮಾರ್ (28) ಸಾವನ್ನಪ್ಪಿದವ.

ಕಲಬುರಗಿ ಮೂಲದ ಅರುಣ್ ಕೆಲಸ‌ ಅರಸಿ ನಿನ್ನೆ ಬೆಂಗಳೂರಿಗೆ ಬಂದಿದ್ದ. ಇಂದು ಬೆಳಗ್ಗೆ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತನ ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಅವರು ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ. ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನRML ಆಸ್ಪತ್ರೆ ಭ್ರಷ್ಟಾಚಾರ ಪ್ರಕರಣ: ಮತ್ತಿಬ್ಬರನ್ನು ಬಂಧಿಸಿದ ಸಿಬಿಐ
ಮುಂದಿನ ಲೇಖನಕಾಂಗ್ರೆಸ್ ‌ನಿಂದ ಜನಾಂಗೀಯ ‌ನಿಂದನೆ, ಶಾಂತಿಯ ತೋಟ ಕದಡಿದ ಕಾಂಗ್ರೆಸ್ ನಾಯಕರು: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ