ಮನೆ ರಾಷ್ಟ್ರೀಯ ಚಲಿಸುತ್ತಿರುವ ರೈಲಿನೊಂದಿಗೆ ವಿಡಿಯೋ ಶೂಟ್: ಯುವಕ ಸಾವು

ಚಲಿಸುತ್ತಿರುವ ರೈಲಿನೊಂದಿಗೆ ವಿಡಿಯೋ ಶೂಟ್: ಯುವಕ ಸಾವು

0

ಹೈದರಾಬಾದ್(Hydarabad): ಚಲಿಸುತ್ತಿರುವ ರೈಲಿನ ಜತೆ ವಿಡಿಯೊ ಶೂಟಿಂಗ್‌ ಮಾಡಲು ಪ್ರಯತ್ನಿಸಿದ ಯುವಕ ರೈಲಿನಡಿ ಸಿಲುಕಿ ಮೃತಪಟ್ಟ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಳಿಪೇಟ್ ಎಂಬಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಹನುಮಕೊಂಡ ಜಿಲ್ಲೆಯ ವಡ್ಡಪಲ್ಲಿ ಗ್ರಾಮದ ನಿವಾಸಿ, ಎಂಜಿನಿಯರಿಂಗ್ ವಿದ್ಯಾರ್ಥಿ ಚಿಂತಕುಲ ಅಕ್ಷಯರಾಜ್ (17) ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ರೈಲು ಹಿಂದಿನಿಂದ ಬರುತ್ತಿದ್ದಾಗ ಅಕ್ಷಯರಾಜ್ ಕೈಗಳನ್ನು ಜೇಬಿನಲ್ಲಿರಿಸಿ ವಿಡಿಯೊಗೆ ಪೋಸ್ ಕೊಡುತ್ತಾ ಹಳಿಯ ಮೇಲೆ ನಡೆದು ಬರುತ್ತಿದ್ದರು. ಅವರ ಸ್ನೇಹಿತ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ರೈಲು ಹತ್ತಿರ ಬರುತ್ತಿರುವ ಬಗ್ಗೆ ಸ್ನೇಹಿತ ಎಚ್ಚರಿಕೆ ನೀಡುತ್ತಿರುವುದು ಮತ್ತು ಕೆಲವೇ ಕ್ಷಣಗಳಲ್ಲಿ ರೈಲು ಡಿಕ್ಕಿ ಹೊಡೆದು ಅಕ್ಷಯರಾಜ್ ಬದಿಗೆ ಎಸೆಯಲ್ಪಟ್ಟಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಅಕ್ಷಯರಾಜ್ ಅನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾತ್ತು. ಆದರೆ, ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ.