ಮನೆ ಅಪರಾಧ ಮೈಸೂರು: ಮನೆ ಕುಸಿದು ಕೂಲಿ ಕಾರ್ಮಿಕ ಸಾವು

ಮೈಸೂರು: ಮನೆ ಕುಸಿದು ಕೂಲಿ ಕಾರ್ಮಿಕ ಸಾವು

0

ಮೈಸೂರು(Mysuru):  ಮನೆ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿ ಮನೆ ಮಾಲೀಕನಿಗೆ ಗಾಯಗಳಾಗಿರುವ ಘಟನೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ಹೆಬ್ಬಲಗುಪ್ಪೆ ಗ್ರಾಮದಲ್ಲಿ ನಡೆದಿದೆ.

ಕೂಲಿಕಾರ್ಮಿಕ ಕುಳ್ಳಯ್ಯ ಮೃತಪಟ್ಟವರು. ಮನೆ ಮಾಲೀಕ ಬೋರಯ್ಯಗೆ ಗಾಯಗಳಾಗಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಮಳೆಯಿಂದಾಗಿ  ಶಿಥಿಲಗೊಂಡಿದ್ದ ಮನೆ ರಿಪೇರಿ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.