ಮನೆ Uncategorized ಹಾಸ್ಯ ಚಟಾಕಿ

ಹಾಸ್ಯ ಚಟಾಕಿ

0

ಪೈಲಟ್ ಅಳಿಯ

ಹುಡುಗನದ್ದು ಏರ್‌ಲೈನ್ಸಲ್ಲಿ ಕೆಲಸ. ಮಗಳ ಜೀವನ ಆಕಾಶದಲ್ಲಿ ತೇಲಾಡ್ತಾ ಇರ್ತದೆ ಅಂತ ಧಾಮ್ ಧೂಮ್ ಅಂತ ಮದುವೆ ಮಾಡ್ತಾರೆ. ಮದುವೆ ಎಲ್ಲಾ ಆದ್ಮೇಲೆ ಯಾರೋ ಬಂದು, ಹುಡುಗ ಏರ್‌ಲೈನ್ಸಲ್ಲಿ ಕೆಲಸ ಮಾಡೋಲ್ಲ, ಅವ ಲೋಕಲ್ ಅಂತ ಹೇಳ್ತಾರೆ. ಅತ್ತೆ ನೇರವಾಗಿ ಅಳಿಯನನ್ನೇ ವಿಚಾರಿಸ್ತಾರೆ:

ಅತ್ತೆ: ಅಳಿಯಂದ್ರೆ, ನೀವು ಏನ್ ಕೆಲಸ ಮಾಡ್ತೀರಿ?

ಅಳಿಯ: ನಾನು ಪೈಲಟ್ ಅಗಿದೀನಿ

ಅತ್ತೆ: ಯಾವ ಏರ್‌ಲೈನ್ಸಲ್ಲಿ ಪೈಲಟ್ ಆಗಿದೀರಿ?

ಅಳಿಯ: ಮದುವೆ ಮನೇಲಿ ಡ್ರೋನ್ ಹಾರಿಸೋ ಕೆಲಸ ಮಾಡ್ತೀನಿ ಅತ್ತೆ.

ಅಳಿಯನ ಮಾತು ಕೇಳಿ ಅತ್ತೆಗೆ ತಲೆ ಸುತ್ತು…

ಕುಡುಕ ರೋಗಿ

ಡಾಕ್ಟರ್: ಹೇಗಿದೀರಿ? ಕುಡಿಯೋದನ್ನು ಬಿಟ್ಟಿದ್ದೀರೋ ಇಲ್ಲವೋ?

ರೋಗಿ: ಈಗ ಕುಡಿಯೋದನ್ನ ಬಿಟ್ಟಿದ್ದೀನಿ ಡಾಕ್ಟ್ರೆ, ಆದ್ರೆ, ಯಾರಾದ್ರೂ ಜಾಸ್ತಿ ಫೋರ್ಸ್ ಮಾಡಿದ್ರೆ ಕುಡೀತೀನಿ ಅಷ್ಟೇ.

ಡಾಕ್ಟರ್: ಸೂಪರ್… ನಿಮ್ ಜೊತೆ ಇದಾರಲ್ಲ ಇವರು ಯಾರು? ನಿಮ್ಮ ತಮ್ಮನಾ?

ರೋಗಿ: ನಂಗೆ ಕುಡಿಯೋದಕ್ಕೆ ಫೋರ್ಸ್ ಮಾಡೋಕೆ ಅಂತ ನಾನೇ ಇವನನ್ನು ಇಟ್ಟುಕೊಂಡಿದೀನಿ ಸಾರ್.