ಮನೆ ತಂತ್ರಜ್ಞಾನ ಐಫೋನ್ 13 ಬೆಲೆ ಕಡಿತಗೊಳಿಸಿದ ಅಮೆಜಾನ್ ಮತ್ತು ಫ್ಲಿಪ್’ಕಾರ್ಟ್!

ಐಫೋನ್ 13 ಬೆಲೆ ಕಡಿತಗೊಳಿಸಿದ ಅಮೆಜಾನ್ ಮತ್ತು ಫ್ಲಿಪ್’ಕಾರ್ಟ್!

0

ಆ್ಯಪಲ್ ಕಂಪನಿ ಐಫೋನ್ 14 ಅನ್ನು ಇಂದು ರಾತ್ರಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಬಿಡುಗಡೆಗೆ ಮುಂಚಿತವಾಗಿ, ಐಫೋನ್ 13 ಫ್ಲಿಪ್​ಕಾರ್ಟ್ ಮತ್ತು ಅಮೆಜಾನ್​ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ.

ಐಫೋನ್ 13 ನ ಅಧಿಕೃತ ಬೆಲೆ 79,900 ರೂ.ಗಳಿಂದ ಪ್ರಾರಂಭವಾಗುತ್ತದೆ ಆದರೆ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ನಲ್ಲಿ 128GB ಮಾದರಿಯನ್ನು ಫ್ಲಾಟ್ ರಿಯಾಯಿತಿ ದರದಲ್ಲಿ, ಅಂದರೆ 69,999 ರೂಗಳಲ್ಲಿ ಮಾರಾಟ ಮಾಡುತ್ತಿದೆ. ಇದು ಸುಮಾರು 10,000 ರೂಗಳ ಫ್ಲಾಟ್ ರಿಯಾಯಿತಿಯಾಗಿದೆ. ಹೆಚ್ಚುವರಿಯಾಗಿ, ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಲಭ್ಯವಿವೆ.

ಫ್ಲಿಪ್​ಕಾರ್ಟ್ ಮತ್ತು ಅಮೆಜಾನ್ ಐಫೋನ್ 13 ಅನ್ನು 69,999 ರೂಗಳ ಆರಂಭಿಕ ಬೆಲೆಗೆ ಮಾರಾಟ ಮಾಡುತ್ತಿವೆ. ಇದು 128GB ಮಾದರಿಯ ಬೆಲೆಯಾಗಿದೆ.

ಇನ್ನು ಐಫೋನ್ 13 256GB ಮತ್ತು 512GB ಸ್ಟೋರೇಜ್ ಮಾಡೆಲ್​ಗಳನ್ನು ಸಹ ರಿಯಾಯಿತಿ ಬೆಲೆಗಳೊಂದಿಗೆ ಪಟ್ಟಿ ಮಾಡಲಾಗಿದೆ. ಅಧಿಕೃತವಾಗಿ, iPhone 13 ಭಾರತದಲ್ಲಿ 79,900 ರೂ.ಗಳಿಂದ ಪ್ರಾರಂಭವಾಗುತ್ತದೆ. 265GB ಮತ್ತು 512GB ಸ್ಟೋರೇಜ್ ಮಾದರಿಗಳು ಕ್ರಮವಾಗಿ ರೂ 89,900 ಮತ್ತು ರೂ 1,09,900 ಬೆಲೆಯಲ್ಲಿ ಖರೀದಿಗೆ ಸಿಗುತ್ತಿವೆ.

ಅಮೆಜಾನ್​ಗಳಲ್ಲಿ 128GB ಸ್ಟೋರೇಜ್ ಮಾದರಿಯು iPhone 13 ರಿಯಾಯಿತಿ ದರದಲ್ಲಿ 69,999 ರೂಗಳಲ್ಲಿ ಮಾರಾಟವಾಗುತ್ತಿದೆ. 256GB ಮತ್ತು 512GB ಸ್ಟೋರೇಜ್ ಮಾಡೆಲ್​ಗಳನ್ನು ಅನುಕ್ರಮವಾಗಿ 76,900 ಮತ್ತು 99,990 ರೂಗಳಲ್ಲಿ ರಿಯಾಯಿತಿ ದರದಲ್ಲಿ ಪಟ್ಟಿ ಸಿಗುತ್ತಿದೆ.

ಸುಮಾರು 10,000 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ್​ಗಿಂತ ಜೊತೆಗೆ, ಅಮೆಜಾನ್​ನಲ್ಲಿ ವಿನಿಮಯ ಮಾಡುವ ಅವಕಾಶವಿದೆ. ವಿನಿಮಯದ ಮೂಲಕ 12,559 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ.

ಫ್ಲಿಪ್​ಕಾರ್ಟ್​ನಲ್ಲಿ 128GB ಸ್ಟೋರೇಜ್ ಮಾದರಿಯ ಐಫೋನ್ 13 69,999 ರೂಗಳಲ್ಲಿ ಮಾರಾಟವಾಗುತ್ತಿದೆ. 256GB ಮತ್ತು 512GB ಸ್ಟೋರೇಜ್ ಮಾಡೆಲ್​ಗಳನ್ನು ಅನುಕ್ರಮವಾಗಿ 79,900 ಮತ್ತು 99,999 ರೂಗಳಲ್ಲಿ ರಿಯಾಯಿತಿ ದರಗಳಲ್ಲಿ ಖರೀದಿಸಬಹುದಾಗಿದೆ.

ಫ್ಲಿಪ್​ಕಾರ್ಟ್ ಇಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಜೊತೆಗೆ ಫ್ಲಾಟ್ ಡಿಸ್ಕೌಂಟ್​ಗಳ  ಮೇಲೆ ಫ್ಲಿಪ್​ಕಾರ್ಟ್ ತಮ್ಮ ಎಚ್​ಡಿಎಫ್​ಸಿ  ಬ್ಯಾಂಕ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವ ಗ್ರಾಹಕರಿಗೆ ರೂ 2,000 ರಿಯಾಯಿತಿಯನ್ನು ನೀಡುತ್ತಿದೆ.

Flipkart ಸಹ 17000 ರೂಪಾಯಿಗಳ ವಿನಿಮಯ ಮೌಲ್ಯವನ್ನು ನೀಡುತ್ತಿದೆ, IDFC FIRST ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ ಹೆಚ್ಚುವರಿ 1000 ರೂ. ನೀಡುತ್ತಿದೆ