ಮನೆ ರಾಷ್ಟ್ರೀಯ ಹೌಸಿಂಗ್ ಸೊಸೈಟಿ ಕಟ್ಟಡದ ಗೋಡೆ ಕುಸಿತ: ನಾಲ್ವರು ಕಾರ್ಮಿಕರ ಸಾವು

ಹೌಸಿಂಗ್ ಸೊಸೈಟಿ ಕಟ್ಟಡದ ಗೋಡೆ ಕುಸಿತ: ನಾಲ್ವರು ಕಾರ್ಮಿಕರ ಸಾವು

0

ಉತ್ತರ ಪ್ರದೇಶ(Uttarpradesh): ನೋಯ್ಡಾದಲ್ಲಿ ನಿರ್ಮಾಣಗೊಂಡಿದ್ದ ಹೌಸಿಂಗ್ ಸೊಸೈಟಿವೊಂದರ ಕಟ್ಟಡದ ಗೋಡೆ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ದುರ್ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕೆಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರನ್ನೂ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್​​​ ಎಲ್​​ವೈ ಮಾತನಾಡಿ, ನೋಯ್ಡಾ ಸೆಕ್ಟರ್​​-21ರಲ್ಲಿ ಜಲ ವಾಯು ವಿಹಾರ್​ ಬಳಿ ಒಳಚರಂಡಿ ದುರಸ್ತಿ ಕಾಮಗಾರಿಗೋಸ್ಕರ ನೋಯ್ಡಾ ಪ್ರಾಧಿಕಾರ ಗುತ್ತಿಗೆ ನೀಡಿತ್ತು. ಕಾರ್ಮಿಕರು ಇಟ್ಟಿಗೆ ಹೊರತೆಗೆಯುತ್ತಿದ್ದ ವೇಳೆ ದಿಢೀರ್​ ಆಗಿ ಗೋಡೆ ಕುಸಿದಿದೆ ಎಂದಿದ್ದಾರೆ.

ಘಟನೆ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ತೀವ್ರ ಸಂತಾಪ ವ್ಯಕ್ತಪಡಿಸಿ,  ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.