ಮನೆ Uncategorized ಬದುಕೆಂಬ ಬಯಲಿಗೆ – ಕವನ

ಬದುಕೆಂಬ ಬಯಲಿಗೆ – ಕವನ

0

ಬದುಕೆಂಬ ಬಯಲಿಗೆ

ಭರವಸೆಯ ಮುಗಿಲಿನ

ಬೆಚ್ಚನೆ ಹೊದಿಕೆ ಹೊದಿಸಿ,

ನಂಬಿಕೆಯೆಂಬ ರವಿಯ

ಚಿರಂತನ ದೀಪ ಉರಿಸಿ

ನೆನಪುಗಳ ಶಶಿಯೆಂಬ

ಬೆಳದಿಂಗಳ ಸ್ಫುರಿಸಿ,

ಪ್ರೀತಿಯ ಮಾರುತವಾಗಿಸಿ

ಉತ್ಸಾಹ ವರ್ಷಧಾರೆಯಾಗಿಸಿ

ಕಾಪಿಡುತ ಕಾಯಬೇಕು.

ಹರಡಿ ನಳನಳಿಸುತ್ತಾ

ಹಸಿರಾಗಬೇಕು ಜೀವ ಚೈತನ್ಯ,

ಬಾಳಿನ ಕಣಕಣದಿ ಚಿಮ್ಮಿ

ಹೊಮ್ಮಿ ಝೇಂಕರಿಸಬೇಕು

ಸುಸ್ವರ ಭಾವಮಾಧುರ್ಯ.

– ಎ.ಎನ್.ಆರ್