ಮನೆ ಸುದ್ದಿ ಜಾಲ ASUS – ರಿಪಬ್ಲಿಕ್ ಆಫ್ ಗೇಮರ್ಸ್ :  ಕುವೆಂಪುನಗರದಲ್ಲಿ ಹೊಸ ಶೋರೂಂ ಆರಂಭ

ASUS – ರಿಪಬ್ಲಿಕ್ ಆಫ್ ಗೇಮರ್ಸ್ :  ಕುವೆಂಪುನಗರದಲ್ಲಿ ಹೊಸ ಶೋರೂಂ ಆರಂಭ

0

ಮೈಸೂರು(Mysuru): ಆಸಸ್(ASUS) ರಿಪಬ್ಲಿಕ್ ಆಫ್ ಗೇಮರ್ಸ್ ತನ್ನ  ಹೊಸ ಶೋರೂಂನ್ನು  ಕುವೆಂಪುನಗರದ  ಪಂಚಮಂತ್ರ ರಸ್ತೆ  ಕುಮಾರ್ ಮೆಡಿಕಲ್ ಹತ್ತಿರ # 109 ನಲ್ಲಿ  ಪ್ರಾರಂಭಿಸುತ್ತಿದೆ.

ಸೆಪ್ಟಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಶೋರೂಂ ಉದ್ಘಾಟನಾ ಸಮಾರಂಭ ನಡೆಯಲಿದೆ.

ಶೋರೂಂನ್ನು ಸಿಂಗಾಪೂರ್ ನ  ಫಿಜರ್ ಫಾರ್ಮಾ ಸಿಇಓ, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ, ಪಿಎಂಒಗೆ ಆರ್ಥಿಕ ಸಲಹೆಗಾರ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗನೂ ಆಗಿರುವ ಡಾ. ಸುಬ್ರಹ್ಮಣ್ಯ ಶರ್ಮಾ ಅವರು ಉದ್ಘಾಟಿಸಲಿದ್ದಾರೆ.