ಮನೆ ದೇವಸ್ಥಾನ 45 ವರ್ಷಗಳ  ಬಳಿಕ ಚಂದ್ರಮೌಳೇಶ್ವರ ದೇವರಿಗೆ ಆಭರಣ ಧಾರಣೆ ಯೋಗ

45 ವರ್ಷಗಳ  ಬಳಿಕ ಚಂದ್ರಮೌಳೇಶ್ವರ ದೇವರಿಗೆ ಆಭರಣ ಧಾರಣೆ ಯೋಗ

0

ಮೈಸೂರು(Mysuru): ನಾಲ್ವಡಿ ಅವರು ನಿರ್ಮಾಣ ಮಾಡಿಸಿದ್ದ  ತಾಲ್ಲೂಕಿನ ಸಿದ್ದಲಿಂಗಪುರದಲ್ಲಿರುವ ಚಂದ್ರಮೌಳೇಶ್ವರ ದೇವರಿಗೆ 45 ವರ್ಷಗಳ ನಂತರ ಆಭರಣ ಧಾರಣೆ ಯೋಗ ಒದಗಿ ಬಂದಿದೆ‌.

ಸದರಿ ದೇವಾಲಯವು 1932ರಲ್ಲಿ ನಿರ್ಮಾಣವಾಗಿದ್ದು ಕಾಶಿಯಿಂದ ಬಾಣಲಿಂಗ ತರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು  ಪ್ರತಿಷ್ಠಾಪನೆ ಮಾಡಿಸಿದ್ದರು.

ಗ್ರಾಮದಲ್ಲಿ ಪುರೋಹಿತರಾಗಿದ್ದ ಸುಬ್ಬಾಶಾಸ್ತ್ರಿ ಅವರಿಂದ ಆಭರಣಗಳ ದೇಣಿಗೆ ನೀಡಲಾಗಿದ್ದು, ಚಂದ್ರಮೌಳೇಶ್ಬರನಿಗೆ ನಾಗಾಭಾರಣ, ಬೆಳ್ಳಿ ಕೊಳಗ, ಅಮ್ಮನವರಿಗೆ ಕಿರೀಟ, ಹಸ್ತ‌ ಕಮಲಗಳು, ಪಾದ ಸೇರಿ ವಿವಿಧ ಬಗೆಯ ಆಭರಣಗಳನ್ನು ದೇಣಿಗೆ ನೀಡಲಾಯಿತು. 45 ವರ್ಷಗಳ ನಂತರ ದೇವಾಲಯಕ್ಕೆ ಬಂದ ದಾನಿಗಳ ಕುಟುಂಬದವರ ಕೋರಿಕೆಯಂತೆ ಆಭರಣಗಳ ಧಾರಣೆಗೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳಿದ್ದರೂ, ಚಂದ್ರಮೌಳೇಶ್ವರನಿಗೆ ಧಾರಣೆಯ ಯೋಗ ಕೂಡಿ ಬಂದಿರಲಿಲ್ಲ. ಈಗ ಕುಟುಂಬದವರ ಮನವಿ ಮೇರೆಗೆ ಇನ್ಮುಂದೆ ಪ್ರತಿ ವರ್ಷ ಶಿವರಾತ್ರಿಗೆ ಆಭರಣಗಳ ಧಾರಣೆ ಮಾಡಲಾಗುವುದು. ಕುಟುಂಬದವರಿಂದ ದೇವಾಲಯದಲ್ಲಿ ವೇದ ಪಾರಾಯಣ, ರುದ್ರಾಭಿಷೇಕ, ಹೋಮ ಹವನ ಪೂಜೆ ನಡೆಸಲಾಯಿತು. ಸುಬ್ಬಾಶಾಸ್ತ್ರಿ, ರಾಮಾ ಶಾಸ್ತ್ರಿಗಳ ಇಡೀ ಕುಟುಂಬದ 60 ಜನರಿಂದ ವಿಶೇಷ ಪೂಜೆ ನಡೆಯಿತು.