ಮನೆ ಯೋಗಾಸನ ಹಿಮ್ಮಡಿ ನೋವಿನ ನಿವಾರಣೆಗೆ ಈ ಯೋಗಾಸನ ಒಳಿತು

ಹಿಮ್ಮಡಿ ನೋವಿನ ನಿವಾರಣೆಗೆ ಈ ಯೋಗಾಸನ ಒಳಿತು

0

ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಹಿಮ್ಮಡಿ ನೋವು ಕಾಣಸಿಕೊಳ್ಳುತ್ತಿದೆ. ಬೆಳಗ್ಗೆ ಎದ್ದಾಕ್ಷಣ ಕಾಲನ್ನು ನೆಲಕ್ಕೂ ಊರಲು ಕೂಡ ಸಾಧ್ಯವಾಗದಷ್ಟು ನೋವು ಉಂಟಾಗುತ್ತದೆ. ಸಾಮಾನ್ಯವಾಗಿ ವಾತ ದೋಷದಿಂದ ಈ ನೋವು ಕಾಣಿಸಿಕೊಳ್ಳುತ್ತದೆ.

ಎಷ್ಟು ನೋವಿನ ಮುಲಾಮುಗಳನ್ನು ಹಚ್ಚಿದರೂ, ಎಣ್ಣೆ ಹಚ್ಚಿ ಮಸಾಜ್ ಮಾಡಿದರೂ ಆ ಕ್ಷಣಕ್ಕೆ ನೋವು ಕಡಿಮೆಯಾದಂತಾಗುತ್ತದೆ. ಆದರೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಈ ಹಿಮ್ಮಡಿ ನೋವನ್ನು ನಿಯಮಿತ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲ ಹೋಗಲಾಡಿಸಿಕೊಳ್ಳಬಹುದಾಗಿದೆ.

ವಜ್ರಾಸನ

ವಜ್ರಾಸನ ಮಾಡುವುದರಿಂದ ಹಿಮ್ಮಡಿ ನೋವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಹಿಮ್ಮಡಿಯ ಮೇಲೆ ಭಾರ ಬೀಳುವುದರಿಂದ ಒತ್ತಿದಂತೆ ಅನುಭವವಾಗುತ್ತದೆ. ಇದರಿಂದ ಹಿಮ್ಮಡಿಗೆ ಮಸಾಜ್ ನೀಡಿದಂತಾಗುತ್ತದೆ. ಪ್ರತಿದಿನ 15 ನಿಮಿಷಗಳ ಕಾಲ ವಜ್ರಾಸನ ಮಾಡುವುದರಿಂದ ಹಿಮ್ಮಡಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಮಾಡುವ ವಿಧಾನ

• ನಿಧಾನವಾಗಿ, ನಿಮ್ಮ ಮೊಣಕಾಲುಗಳ ಮೇಲೆ ಕುಳಿತುಕೊಳ್ಳುವ ಮೂಲಕ ಪ್ರಾರಂಭಿಸಿ, ನಿಮ್ಮ ಕಾಲುಗಳನ್ನು ಹೊರಕ್ಕೆ ಚಾಚಿ, ನಿಮ್ಮ ತೊಡೆಗಳು ಒಟ್ಟಿಗೆ ತನ್ನಿ.

• ನಂತರ ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ.

• 30 ಸೆಕೆಂಡುಗಳಿಂದ ಒಂದು ನಿಮಿಷದವರೆಗೆ ದೀರ್ಘವಾಗಿ ಉಸಿರಾಡಿ.

ಪಶ್ಚಿಮೋತ್ಥಾನಾಸನ

ಈ ಆಸನವು ಹಿಮ್ಮಡಿಯ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹವನ್ನು ಸಂಪೂರ್ಣವಾಗಿ ಬಗ್ಗಿಸಿ, ಕೈಗಳಿಂದ ಪಾದವನ್ನು ಹಿಡಿದುಕೊಳ್ಳುವುದರಿಂದ ಪಾದ ಹಿಮ್ಮುಖಕ್ಕೆ ಬಾಗುತ್ತದೆ. ಇದರಿಂದ ಹಿಮ್ಮಡಿಯ ನರಗಳ ಮೇಲಿನ ಒತ್ತಡ ಸಡಿಲವಾಗುತ್ತದೆ. ಆದ್ದರಿಂದ ಪಶ್ಚಿಮೋತ್ಥಾನಾಸನ ಹಿಮ್ಮಡಿ ನೋವನ್ನು ನಿವಾರಿಸಲು ಅತ್ಯುತ್ತಮವಾಗಿದೆ.

ಪಶ್ಚಿಮೋತ್ಥಾನಾಸನ ಮಾಡುವ ವಿಧಾನ

• ಮೊದಲು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ದಂಡಾಸನದಲ್ಲಿ ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಿ.

• ನಂತರ ಎರಡೂ ಕೈಗಳನ್ನು ತೊಡೆಯ ಮೇಲಿರಿಸಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆ ಎತ್ತಿ.

• ಬಳಿಕ ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ ಕೈ ಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ. ನೆನಪಿಡಿ, ಮೊಣಕಾಲು ನೇರವಾಗಿರಲಿ.

• ಇದೇ ಸ್ಥಿತಿಯಲ್ಲಿ ನಾಲ್ಕೈದು ಬಾರಿ ಉಸಿರಾಟ ಮಾಡಿ, ನಂತರ ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಮೇಲಕ್ಕೆ ಬನ್ನಿ.

• ನಂತರ ಉಸಿರನ್ನು ಹೊರಹಾಕುತ್ತಾ ನಿಧಾನವಾಗಿ ಕೈಗಳನ್ನು ಕೆಳಗೆ ಇಳಿಸಿ, ವಿಶ್ರಾಂತಿ ತೆಗೆದುಕೊಳ್ಳಿ.

ವಿಪರೀತ ಕರಿಣಿ

ಹಿಮ್ಮಡಿ ನೋವಿಗೆ ವಿಪರೀತ ಕರಿಣೆ ಬೆಸ್ಟ್ ಆಸನವಾಗಿದೆ. ಕಾಲುಗಳನ್ನು ಮೇಲ್ಮುವಾಗಿ ಇರಿಸಿಕೊಳ್ಳುವುದರಿಂದ ಹಿಮ್ಮಡಿಗಳಿಗೆ ಆರಾಮದಾಯಕ ಅನುಭವ ಸಿಗುತ್ತದೆ. ಅಲ್ಲದೆ ಕೆಳಮುಖವಾಗಿ ರಕ್ತಸಂಚಾರವಾಗುವುದರಿಂದ ಹಿಮ್ಮಡಿಯ ನರಗಳ ಮೆಲೆ ಪರಿಣಾಮ ಬೀರುತ್ತದೆ. ಪ್ರತಿದಿನ 10 ನಿಮಿಷ ಈ ಆಸನ ಮಾಡುವುದರಿಂದ ಹಿಮ್ಮಡಿ ನೋವನ್ನು ಹೋಗಲಾಡಿಬಹುದಾಗಿದೆ.

ಮಾಡುವ ವಿಧಾನ

• ಈ ಭಂಗಿಯನ್ನು ಮಾಡಲು, ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ.

• ನಿಮ್ಮ ಪಾದಗಳನ್ನು ಗೋಡೆಯ ಮೇಲೆ ಮತ್ತು ನಿಮ್ಮ ಕೈಗಳನ್ನು ಪಕ್ಕದಲ್ಲಿ ಇರಿಸಿ.

• ಇದನ್ನು ಮಾಡುವಾಗ, ನಿಮ್ಮ ಸೊಂಟವು ಗೋಡೆಯ ಬಳಿ ಇರಬೇಕು.

• ಪಾದಗಳು ಮೇಲ್ಮುಖವಾಗಿರಬೇಕು.

• ಕನಿಷ್ಠ 20 ರ ವರೆಗೆ ಎಣಿಸುವಷ್ಟು ಹೊತ್ತು ಅದೇ ಸ್ಥಾನದಲ್ಲಿರಿ ಇದು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಲು ಉಪಯುಕ್ತವಾಗಿದೆ. ಅಲ್ಲದೆ ಹಿಮ್ಮಡಿ ನೋವು ನಿವಾರಣೆ ಮಾಡುತ್ತದೆ.

ತಾಡಾಸನ

ಈ ಭಂಗಿಯು ಹಿಮ್ಮಡಿಗಳಿಗೆ ಹೆಚ್ಚು ಒಳ್ಳೆಯದು. ನೇರವಾಗಿ ನಿಂತುಕೊಳ್ಳುವುದರಿಂದ ಹಿಮ್ಮಡಿಗೆ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಅಲ್ಲದೆ ನರಗಳು ಸಡಿಲಗೊಳ್ಳುತ್ತವೆ. ಈ ಮೂಲಕ ಹಿಮ್ಮಡಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಮಾಡುವ ವಿಧಾನ

• ಯೋಗ ಚಾಪೆಯ ಮೇಲೆ ನಿಂತುಕೊಳ್ಳಿ. ನಿಮ್ಮ ಪಾದಗಳು ಅಗಲವಾಗಿರಿಸಿಕೊಳ್ಳಿ

• ನಿಮ್ಮ ಕೈಗಳು ನಿಮ್ಮ ದೇಹದ ಪಕ್ಕದಲ್ಲಿರಬೇಕು.

• ಆಳವಾಗಿ ಉಸಿರಾಡಿ ಮತ್ತು ನಿಧಾನವಾಗಿ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ನಂತರ ನಿಮ್ಮ ಬೆರಳುಗಳನ್ನು ಇಂಟರ್ಲಾಕ್ ಮಾಡಿ.

• ಹಿಮ್ಮಡಿಯನ್ನು ಕೊಂಚ ಮೇಲಕ್ಕೆತ್ತಿ ಬೆರಳುಗಳ ಮೇಲೆ ನಿಂತುಕೊಳ್ಳಿ. ಮೂರರಿಂದ ನಾಲ್ಕು ಬಾರಿ ಉಸಿರಾಟ ನಡೆಸಿ ನಂತರ ಸಹಜ ಸ್ಥಿತಿಗೆ ಬನ್ನಿರಿ.

ಉತ್ಕಟಾಸನ

ಉತ್ಕಟಾಸನದಿಂದ ಪಾದಗಳ ಮೇಲೆ ಒತ್ತಡ ಬಿದ್ದು ನಂತ ನರಗಳು ಸಡಿಲಗೊಳ್ಳುತ್ತವೆ. ಉತ್ಕಟಾಸನದಿಂದ ಹಿಮ್ಮಡಿನೋವನ್ನು ಕಡಿಮೆ ಮಾಡಬಹುದಾಗಿದೆ. ಆಸನದ ನಂತರ ನಿಮ್ಮ ಪಾದಗಳಿಗೆ ಆರಾಮದಾಯಕ ಅನುಭವವನ್ನು ಈ ಆಸನ ನೀಡುತ್ತದೆ.

ಮಾಡುವ ವಿಧಾನ

• ನೀವು ಕುರ್ಚಿಯಲ್ಲಿ ಕುಳಿತಿರುವಂತೆ ಮೊಣಕಾಲುಗಳನ್ನು ಬಾಗಿಸಿ. ನಿಮ್ಮ ತೊಡೆಗಳನ್ನು ಪರಸ್ಪರ ಸಮಾನಾಂತರವಾಗಿ ಇರಿಸಿ

• ಮೊಣಕಾಲುಗಳು ಕಾಲ್ಬೆರಳುಗಳ ಮೇಲೆ ಅಥವಾ ಮುಂದೆ ಇರುತ್ತದೆ. ನಿಮ್ಮ ಸೊಂಟವು ಹಿಂದಕ್ಕೆ ಚಲಿಸುವಾಗ ನಿಮ್ಮ ತಲೆಯು ಮುಂದಕ್ಕೆ ವಾಲುತ್ತದೆ. ನೀವು ನಿಮ್ಮ ತೋಳುಗಳನ್ನು ನೇರವಾಗಿ ಮೇಲಕ್ಕೆ ಎತ್ತಬಹುದು, ಅಥವಾ ಸೊಂಟದ ಮೇಲೆ ಕೈಗಳನ್ನು ಇರಿಸಿ. ಈ ಭಂಗಿಯು ಪಾದವನ್ನು ಬಗ್ಗಿಸುತ್ತದೆ ಇದರಿಂದ ಸ್ನಾಯುರಜ್ಜುಗಳು ಹಿಗ್ಗುವ ಮೂಲಕ ಹಿಮ್ಮಡಿ ನೋವಿನ ನಿವಾರಣೆ ಮಾಡುತ್ತದೆ.