ಮನೆ ಮನರಂಜನೆ ಯುವ ದಸರಾದಲ್ಲಿಂದು ಗಾಯಕಿ ಮಂಗ್ಲಿ ಮೋಡಿ: ಹರ್ಷಿಕಾ ಪೂಣಚ್ಚ, ವಿಜಯ ರಾಘವೇಂದ್ರ ತಾರಾ ಮೆರಗು

ಯುವ ದಸರಾದಲ್ಲಿಂದು ಗಾಯಕಿ ಮಂಗ್ಲಿ ಮೋಡಿ: ಹರ್ಷಿಕಾ ಪೂಣಚ್ಚ, ವಿಜಯ ರಾಘವೇಂದ್ರ ತಾರಾ ಮೆರಗು

0

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾದ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾಗಿರುವ ಯುವ ದಸರಾ ಸಂಭ್ರಮದಲ್ಲಿ  ಖ್ಯಾತ ಗಾಯಕಿ ಮಂಗ್ಲಿ ಮೈಸೂರಿಗರ ಮನಸೂರೆಗೊಳಿಸಲು ಆಗಮಿಸುತ್ತಿದ್ದಾರೆ.

ರಾಬರ್ಟ್’ ಸಿನಿಮಾದ  ‘ಕಣ್ಣೇ ಅಧಿರಿಂದಿ’ ಹಾಡು ವೈರಲ್ ಆಗಿ, ಯೂಟ್ಯೂಬ್‌ನಲ್ಲಿಯೂ ಹಾಡು ಸೂಪರ್-ಡೂಪರ್ ಹಿಟ್ ಆಗಿತ್ತು.‌ಇದಾದ ಬಳಿಕ ರಾ‌ ರಾ ರಕ್ಕಮ್ಮ ಹಾಡು ಕೂಡ ಮೋಡಿ ಮಾಡಿತ್ತು. ಇಂದು ಮೈಸೂರಿನಲ್ಲಿ ಇವರ ಗಾಯನ ಲಹರಿ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವುದರಲ್ಲಿ ಆಶ್ಚರ್ಯವಿಲ್ಲ.

ಇದರೊಂದಿಗೆ ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ.

ಇದಕ್ಕೂ ಮುನ್ನ  ಕನ್ನಡ ಚಿತ್ರರಂಗದ  ಖ್ಯಾತ ಚಿತ್ರತಾರೆಯರಾದ ಹರ್ಷಿಕಾ ಪೂಣಚ್ಚ, ವಿಜಯರಾಘವೇಂದ್ರ ಅವರಿಂದ ಕನ್ನಡ ಸ್ಟಾರ್ ನೈಟ್ ಕಾರ್ಯಕ್ರಮವಿದ್ದು, ಜನರನ್ನು ಮನರಂಜಿಸಲಿದ್ದಾರೆ. ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನವಿರಲಿದೆ.
 
ಯುವ ದಸರಾದ ಈ ಎಲ್ಲಾ ಕಾರ್ಯಕ್ರಮಗಳನ್ನು ಲೈವ್ ನಲ್ಲಿ ವೀಕ್ಷಿಸಲು ಸವಾಲ್ ಟಿವಿ ಯೂಟ್ಯೂಬ್ ಚಾನೆಲ್  https://www.youtube.com/channel/UCmDoYGj_oDaxpT_t7Pa9iEQ ಗೆ ಭೇಟಿ ನೀಡಿ.