ಮನೆ ಅಪರಾಧ ಮಹಿಳಾ ಪಿಎಸ್ಐಗೆ ಅವಾಚ್ಯ ಶಬ್ಧಗಳಿಂದ ನಿಂದನೆ: ಬಿಜೆಪಿ ಮುಖಂಡನ ವಿರುದ್ದ ಎಫ್’ಐಆರ್

ಮಹಿಳಾ ಪಿಎಸ್ಐಗೆ ಅವಾಚ್ಯ ಶಬ್ಧಗಳಿಂದ ನಿಂದನೆ: ಬಿಜೆಪಿ ಮುಖಂಡನ ವಿರುದ್ದ ಎಫ್’ಐಆರ್

0

ಮೈಸೂರು(Mysuru): ಯುವದಸರಾ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ಅಪ್ಪಣ್ಣ ವಿರುದ್ಧ ಮಹಿಳಾ ಪೊಲೀಸರೊಬ್ಬರು ದೂರು ನೀಡಿದ್ದು, ಎಫ್.ಐ.ಆರ್ ದಾಖಲಿಸಲಾಗಿದೆ.
ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಮಿತಾ ಎಂಬುವವರು ಬಿಜೆಪಿ ಮುಖಂಡ ಅಪ್ಪಣ್ಣ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಯುವದಸರಾ ಕಾರ್ಯಕ್ರಮಕ್ಕೆ ಬಂದೋಬಸ್ತ್ ಗಾಗಿ ನನ್ನನ್ನ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಾಯ್ದಿರಿಸಿದ ಜಾಗವನ್ನು ತೋರಿಸಿ ಕಳುಹಿಸಿದೆ. ಈ ಸಮಯದಲ್ಲಿ ಅಪ್ಪಣ್ಣ ಮತ್ತು ಬೆಂಬಲಿಗರನ್ನು ತಡೆದಾಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ಅಪ್ಪಣ್ಣ ಮತ್ತು ಸಹಚರರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಪಿಎಸ್ ಐ ಸ್ಮಿತಾ ಮನವಿ ಮಾಡಿದ್ದಾರೆ.