ಮನೆ ಅಪರಾಧ ಹುಕ್ಕಾ-ಬಾರ್  ಮೇಲೆ ದಾಳಿ: ಅಪ್ರಾಪ್ತರನ್ನು ನೋಡಿ ದಂಗಾದ ಅಧಿಕಾರಿಗಳು

ಹುಕ್ಕಾ-ಬಾರ್  ಮೇಲೆ ದಾಳಿ: ಅಪ್ರಾಪ್ತರನ್ನು ನೋಡಿ ದಂಗಾದ ಅಧಿಕಾರಿಗಳು

0

ಮೈಸೂರು: ಹುಕ್ಕಾ ಬಾರ್‌ಗಳ ಮೇಲೆ ಮೇಯರ್ ಸುನಂದ ಫಾಲನೇತ್ರದಲ್ಲಿ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಆರೋಗ್ಯಾಧಿಕಾರಿ ತಂಡ ದಾಳಿ ನಡೆಸಿದಾಗ, ಅಪ್ರಾಪ್ತರು ಹುಕ್ಕಾ ಸೇದುತ್ತಾ ಕುಳಿತಿರುವುದನ್ನು ಕಂಡು, ಕ್ಷಣಕಾಲ ಅಧಿಕಾರಿಗಳು ದಂಗಾದರು.

ಮೈಸೂರು ನಗರದಲ್ಲಿ ಹುಕ್ಕಾ ಬಾರ್‌ಗಳ ತಲೆ ಎತ್ತುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ, ದಾಳಿ ನಡೆಸಲಾಗಿತ್ತು.

ದಾಳಿ ವೇಳೆ ಬಹುತೇಕ 18 ವರ್ಷಕ್ಕೂ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳೇ ಇದ್ದದ್ದು ಅಚ್ಚರಿ ತಂದಿದೆ. ದಾಳಿ ವೇಳೆ ಅಧಿಕಾರಿಗಳು ಎಂದು ತಿಳಿಯದೇ ಮಕ್ಕಳು ಪ್ರಶ್ನಿಸಲು ಮುಂದಾಗಿದ್ದಾರೆ. ಆಗ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ.

ದಾಳಿ ಮಾಡುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮತ್ತೊಂದು ಅಂಗಡಿ ಬಾಗಿಲು ಲಾಕ್ ಮಾಡಲಾಗಿತ್ತು.

ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೇಯರ್ ಸುನಂದ ಫಾಲನೇತ್ರ, ಟೀನೇಜ್ ಮಕ್ಕಳು ಈ ದುಶ್ಚಟಕ್ಕೆ ಬಲಿಯಾಗಲು ಬಿಡುವುದಿಲ್ಲ. ಮಾಲೀಕರು ಹಾಗೂ ಜಾಗ ಬಾಡಿಗೆ ಕೊಟ್ಟವರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಹಿಂದಿನ ಲೇಖನಹಿಜಾಬ್ ವಿವಾದ: ಸಿಎಫ್ಐ ಪಾತ್ರದ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮುಂದಿನ ಲೇಖನತಂಪು ಪಾನಿಯದಲ್ಲಿ ಮದ್ಯ ಬೆರೆಸಿ, ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಯ ಕೊಲೆಗೆ ಯತ್ನಿಸಿದ ಪತಿ