ಮನೆ ರಾಷ್ಟ್ರೀಯ ಮುಂದಿನ ವರ್ಷ ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ: ಏರ್ ಚೀಫ್ ಮಾರ್ಷಲ್ ಘೋಷಣೆ

ಮುಂದಿನ ವರ್ಷ ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ: ಏರ್ ಚೀಫ್ ಮಾರ್ಷಲ್ ಘೋಷಣೆ

0

ಚಂಡೀಗಢ(chandigarh): ಮುಂದಿನ ವರ್ಷ ಭಾರತೀಯ ವಾಯುಪಡೆಗೆ (ಐಎಎಫ್) ಮಹಿಳಾ ಅಗ್ನಿವೀರರನ್ನು ನೇಮಕಗೊಳಿಸಲಾಗುವುದು ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಘೋಷಿಸಿದ್ದಾರೆ.

ಭಾರತೀಯ ವಾಯುಪಡೆಯ 90ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಚಂಡೀಗಢದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಚೌಧರಿ, ಈ ಮಹತ್ತರ ಘೋಷಣೆ ಮಾಡಿದರು.

ಈ ಐತಿಹಾಸಿಕ ಕ್ಷಣದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳಿಗಾಗಿ ‘ವೆಪನ್ ಸಿಸ್ಟಂ ಬ್ರಾಂಚ್’ ತೆರೆಯಲು ಸರ್ಕಾರವು ಅನುಮೋದನೆ ನೀಡಿದೆ ಎಂದು ಹೇಳಿದರು.

ಆ ಮೂಲಕ ಫ್ಲೈಯಿಂಗ್ ತರಬೇತಿಯಲ್ಲಿ ವೆಚ್ಚದಲ್ಲಿ ಗಣನೀಯ ಕಡಿತ ಉಂಟಾಗಲಿದ್ದು, ₹3,400 ಕೋಟಿ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಾಯುಪಡೆಯಲ್ಲಿ ಹೊಸ ಕಾರ್ಯಾಚರಣೆಯ ಶಾಖೆ ತೆರೆಯಲಾಗುತ್ತಿದೆ ಎಂದು ಸಹ ಚೌಧರಿ ತಿಳಿಸಿದರು.

ವೆಪನ್ ಸಿಸ್ಟಂ ಬ್ರಾಂಚ್ ಮೂಲಕ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಕ್ಷಿಪಣಿಗಳು, ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು, ಪೈಲಟ್ ರಹಿತ ಯುದ್ಧ ವಿಮಾನಗಳು ಮತ್ತು ಅವಳಿ ಮತ್ತು ಬಹು ಸಿಬ್ಬಂದಿ ಯುದ್ಧ ವಿಮಾನಗಳಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಹಣೆಗಳ ಕಾರ್ಯಾಚರಿಸಲಾಗುವುದು.