ಮನೆ ಕವನ ಬದುಕು ಬದಲಾಗಲು ಕಾಲ ಬೇಕು: ಕವನ

ಬದುಕು ಬದಲಾಗಲು ಕಾಲ ಬೇಕು: ಕವನ

0

ಬದುಕು ಬದಲಾಗಲು ಕಾಲ ಬೇಕು,

ಹಸಿವು ಕಸುವಿನಲಿ ಮೀಯ ಬೇಕು,

ಒಲುಮೆ ಚಿಲುಮೆಯ ಜಾಲ ಬೇಕು,

ಪರೀಕ್ಷೆ ನಿರೀಕ್ಷೆಯಲಿ ಬೇಯ ಬೇಕು.

ಒಳಗಿನ ಚೈತನ್ಯದ ಜೊತೆಗೆ,

ಹೊರಗಣ ಕಾರುಣ್ಯ ಸಂಗಮಿಸಿ

ಸಮೀಕರಿಸಿದರಷ್ಟೇ ಸತ್ವವೆಲ್ಲ ತ

ತ್ವವಾಗಿ ಮಾನ್ಯವಾಗಬಲ್ಲುದು.

ಪ್ರತಿಭೆ ಯೋಗ್ಯತೆಯ ಒಡನೆ

ಪರಿಶ್ರಮ ಯೋಗಗಳು ಮೇಳೈಸಿ

ಝೇಂಕರಿಸಿದರಷ್ಟೇ ಬದುಕೆಲ್ಲ ಬೆಳಕಾಗಿ

ಧನ್ಯವಾಗಬಲ್ಲುದು.

  • ಎ.ಎನ್.ಆರ್