ಮನೆ ಮನರಂಜನೆ ಶೀಘ್ರದಲ್ಲೇ ನಟಿ ರಾಕುಲ್ ಪ್ರೀತ್ ಸಿಂಗ್ ಮದುವೆ

ಶೀಘ್ರದಲ್ಲೇ ನಟಿ ರಾಕುಲ್ ಪ್ರೀತ್ ಸಿಂಗ್ ಮದುವೆ

0

ಬೆಂಗಳೂರು(Bengaluru): ನಟ ಹಾಗೂ ಚಿತ್ರ ನಿರ್ಮಾಪಕ ಜಕ್ಕಿ ಬಗ್‌’ನಾನಿಯೊಂದಿಗೆ ನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್‌ ಮಾಡುತ್ತಿರುವುದು ತಿಳಿದಿರುವ ವಿಚಾರ.  ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ ಎಂಬ ಅಧಿಕೃತ ಸುದ್ದಿ ಹೊರಬಿದ್ದಿದೆ.

ರಾಕುಲ್ ಹಾಗೂ ಜಕ್ಕಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ದಿನಾಂಕ ಹಾಗೂ ಜಾಗವನ್ನು ಅಂತಿಮಗೊಳಿಸಲಾಗುತ್ತಿದೆ. ರಾಕುಲ್‌ ಅವರೇ ಮದುವೆ ದಿನದ ಬಗ್ಗೆ ಎಲ್ಲರಿಗೂ ತಿಳಿಸಲಿದ್ದಾರೆ ಎಂದು ರಾಕುಲ್ ಸಹೋದರ ಅಮನ್ ಸಿಂಗ್ ಖಾಸಗಿ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.

ಇನ್ನು ಮದುವೆ ವಿಚಾರವನ್ನು ಜಕ್ಕಿ ಬಗ್‌ನಾನಿ ತಂದೆ ವಾಸು ಅವರು ಕೂಡ ಖಚಿತಪಡಿಸಿದ್ದು, ಮದುವೆ ತಯಾರಿ ನಡೆದಿದೆ ಎಂದು ತಿಳಿಸಿದ್ದಾರೆ.

ಕೋಲ್ಕತ್ತ ಮೂಲದ 36 ವರ್ಷದ ಜಕ್ಕಿ ಬಗ್‌ನಾನಿ ಬಾಲಿವುಡ್‌ ನಟ ಹಾಗೂ ನಿರ್ಮಾಪಕ. 2001 ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.

 ‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್‌ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್‌ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಅತ್ತ ರಾಕುಲ್ ಕೂಡ ಅನೇಕ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಆ ಸಿನಿಮಾಗಳು ಮುಗಿಯಲು ಬಂದಿದ್ದು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಕುಲ್ ಅವರ ‘ಡಾಕ್ಟರ್ ಜಿ’ ಹಾಗೂ ‘ತ್ಯಾಂಕ್ ಗಾಡ್’, ‘ಛತ್ರಿವಾಲಿ’ ಸಿನಿಮಾಗಳು ಇನ್ನೇನು ಬಿಡುಗಡೆಯಾಗಲಿವೆ.