ಮನೆ ರಾಜ್ಯ ಇಂದಿಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ವಿಷಾಧನೀಯ: ಕಮಲಾ

ಇಂದಿಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ವಿಷಾಧನೀಯ: ಕಮಲಾ

0

ಮೈಸೂರು: ಇಂದಿಗೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾಧನಿಯವಾಗಿದೆ. ಮಕ್ಕಳ ಮನಸ್ಸು ಮುಗ್ದವಾದದ್ದು ಅವರನ್ನು ಗೌರವದಿಂದ ಕಾಣಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಕಮಲಾ ಅಭಿಪ್ರಾಯಿಸಿದರು.

ಚೈಲ್ಡ್ ಲೈನ್ -1098 ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅಂತರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ, ಪೋಷಣೆ, ಬಲವಂತದ ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಹಕ್ಕುಗಳಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಡುಗಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ ಎಂದು ತಿಳಿಸಿದರು.

ಪೊಲೀಸ್ ಎಂದರೆ ಭಯವಲ್ಲ, ಭರವಸೆ

ನಜರಬಾದ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಅಧಿಕಾರಿ ವೈಶಾಲಿ ಬಿರಾದರ್ ಮಾತನಾಡಿ,  ಹದಿಹರೆಯದ ಹುಡುಗಿಯರಿಗೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ಗಮನ, ಹೂಡಿಕೆ ಮತ್ತು ಕ್ರಮಕ್ಕಾಗಿ ಸಾಮೂಹಿಕವಾಗಿ ಕರೆ ನೀಡುವ ಉದ್ದೇಶದಿಂದ, ನ್ಯಾಯಯುತವಾದ ಪಾಲನೆ ಮತ್ತು ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಮಾಡಲಾಗುತ್ತಿದೆ. ಪೊಲೀಸ್ ಎಂದರೆ ಭಯವಲ್ಲ ಭರವಸೆ ಎಂದು ತಿಳಿಸಿದರು.

ಚೈಲ್ಡ್ ಲೈನ್ ನೋಡಲ್ ಸಂಯೋಜಕ ಧನರಾಜ್,  ಚೈಲ್ಡ್ ಲೈನ್-1098 ಮತ್ತು ಮಕ್ಕಳ ಹಕ್ಕುಗಳ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅನ್ನಪೂರ್ಣ ಶಾಲೆಯ ಮುಖ್ಯ ಶಿಕ್ಷಕಿ ವಹಿಸಿದ್ದರು. ಆರ್.ಎಲ್.ಹೆಚ್.ಪಿ ಚೈಲ್ಡ್ ಲೈನ್ ಸಂಯೋಜಕ ಶಶಿಕುಮಾರ್, ಶೀಲಾ ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ, ಮೈಸೂರು ನಗರ, ಚೈತ್ರ ಪೊಲೀಸ್ ಸಿಬ್ಬಂದಿ, ಮಕ್ಕಳ ಪ್ರತಿನಿಧಿ ಕು.ಚೈತನ್ಯ, ಕು.ಪ್ರಿಯದರ್ಶಿನಿ, ಶಾಲೆಯ ಶಿಕ್ಷಕರು, ಮಕ್ಕಳು ಚೈಲ್ಡ್ ಲೈನ್ ಸಿಬ್ಬಂದಿಗಳು ಉಪಸ್ಥಿತರಿದ್ದರು.