ಮನೆ ಮನರಂಜನೆ 60 ವರ್ಷದ ದಿನಗೂಲಿ ಕಾರ್ಮಿಕ ಈಗ ಫೇಮಸ್‌ ಮಾಡೆಲ್‌

60 ವರ್ಷದ ದಿನಗೂಲಿ ಕಾರ್ಮಿಕ ಈಗ ಫೇಮಸ್‌ ಮಾಡೆಲ್‌

0

ತಿರುವನಂತಪುರಂ: ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಈಗ ಮಾಡೆಲ್‌ ಆಗಿ, ಹೊರ ಹೊಮ್ಮಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕೋಯಿಕ್ಕೋಡ್‌ನ ಮಮ್ಮಿಕ್ಕಾ  ಎಂಬ ವ್ಯಕ್ತಿ ತನ್ನ ಮಸುಕಾದ ಲುಂಗಿ ಮತ್ತು ಶರ್ಟ್‌ ಧರಿಸಿಯೇ ತನ್ನ ಸ್ಥಳೀಯ ಪ್ರದೇಶದಲ್ಲಿ ಚಿರಪರಿಚಿತರಾಗಿದ್ದರು. ಆದರೆ ಈಗ ತನ್ನ ಸೂಪರ್ ಗ್ಲಾಮ್ ಮೇಕ್ ಓವರ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್‌ ಮಾಡೆಲ್‌ ಆಗಿದ್ದಾರೆ.

ದಿನಗೂಲಿ ಕಾರ್ಮಿಕ ಇತ್ತೀಚೆಗೆ ಸ್ಥಳೀಯ ಸಂಸ್ಥೆಯೊಂದರ ಪ್ರಚಾರದ ಫೋಟೋಶೂಟ್‌ನಲ್ಲಿ ಸೂಟ್ ಧರಿಸಿ ಮತ್ತು ಐಪ್ಯಾಡ್‌ನೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಫೋಟೋಗ್ರಾಫರ್‌ನ ಕೈಚಳಕ ಎಂದು ಕೊಂಡಾಡಿದ್ದಾರೆ.

ಅಂದ ಹಾಗೆ ಈ ದಿನಗೂಲಿ ಕಾರ್ಮಿಕನ ಮಾಡೆಲಿಂಗ್ ಪ್ರತಿಭೆಯನ್ನು ಗುರುತಿಸಿದವರು ಛಾಯಾಗ್ರಾಹಕ ಶರೀಕ್ ವಯಾಲಿಲ್. ಈ ಹಿಂದೆ ಛಾಯಾಗ್ರಾಹಕ ಶರೀಕ್ ವಯಾಲಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಮ್ಮಿಕ್ಕಾರ ಫೋಟೋವನ್ನು ಪೋಸ್ಟ್‌ ಮಾಡಿದ್ದರು. ಈ ಫೋಟೋವನ್ನು ನಟ ವಿನಾಯಕನ್ ಜೊತೆ ಹೋಲಿಕೆ ಮಾಡಲಾಗಿತ್ತು. ಹಾಗೆಯೇ ಸಖತ್‌ ವೈರಲ್‌ ಆಗಿತ್ತು. ಆ ಬಳಿಕ ಯಾವುದೇ ಮಾಡೆಲ್‌ಗಳನ್ನು ಆಯ್ಕೆ ಮಾಡಬೇಕಾದಾಗ ಪರಿಸ್ಥಿತಿ ಬಂದಾಗ ಛಾಯಾಗ್ರಾಹಕ ಶರೀಕ್ ವಯಾಲಿಲ್ ದಿನಗೂಲಿ ಕಾರ್ಮಿಕ ಮಮ್ಮಿಕ್ಕಾರನ್ನೇ ಆಯ್ಕೆ ಮಾಡಿದ್ದಾರೆ. ಇನ್ನು ಮಮ್ಮಿಕ್ಕಾಗೆ ಮೇಕಪ್ ಮಾಡಿದ್ದು ಕಲಾವಿದ ಮಜ್ನಾಸ್. ಆಶಿಕ್ ಫುವಾದ್ ಮತ್ತು ಶಬೀಬ್ ವಯಾಲಿಲ್ ಪ್ರಸಾದನ ಸಹಾಯಕರಾಗಿದ್ದರು. ಸಹಜ ಸೌಂದರ್ಯಕ್ಕೆ ಕಳೆ ನೀಡಿದ ಛಾಯಾಗ್ರಾಹಕ ಯಾವ ವಯಸ್ಸಿನಲ್ಲಿ ನಮ್ಮ ಜೀವನದಲ್ಲಿ ಏನು ಬದಲಾವಣೆ ಆಗುತ್ತದೆ ಎಂದು ನಮಗೂ ಕೂಡಾ ಊಹೆ ಮಾಡಲು ಸಾಧ್ಯವಾಗದು.

ಹಿಂದಿನ ಲೇಖನಪರೀಕ್ಷೆಗೆ ಗೈರು ಹಾಜರಾಗಬೇಡಿ; ನಜ್ಮಾ ನಜೀರ್
ಮುಂದಿನ ಲೇಖನಅಜಿತ್ ಕುಮಾರ್ ನಟನೆಯ ವಲಿಮೈ ಫೆ.24 ರಂದು ತೆರೆಗೆ