ಮನೆ ರಾಷ್ಟ್ರೀಯ ವಿಮಾನಕ್ಕೆ ಹಕ್ಕಿ ಡಿಕ್ಕಿ: ಬೆಂಗಳೂರಿಗೆ ಹೊರಟ ವಿಮಾನ ಮುಂಬೈಗೆ ವಾಪಸ್

ವಿಮಾನಕ್ಕೆ ಹಕ್ಕಿ ಡಿಕ್ಕಿ: ಬೆಂಗಳೂರಿಗೆ ಹೊರಟ ವಿಮಾನ ಮುಂಬೈಗೆ ವಾಪಸ್

0

ಮುಂಬೈ(Mumbai): ಪ್ರಯಾಣಿಕರನ್ನು ಹೊತ್ತು ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಆಕಾಸಾ ಏರ್ ಕಂಪನಿಯ ವಿಮಾನಕ್ಕೆ ಹಕ್ಕಿ ಡಿಕ್ಕಿಯಾದ ಪರಿಣಾಮ ವಿಮಾನ ಮುಂಬೈಗೆ ವಾಪಾಸ್ ತೆರಳಿದೆ.

ಘಟನೆಯಿಂದ ವಿಮಾನ ಮಾರ್ಗಮಧ್ಯದಲ್ಲೇ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ತೆರಳಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆ ಬಂದಿದ್ದರಿಂದ ಪೈಲಟ್ ಆಕಾಸಾ ಏರ್ ಕಂಪನಿಯ AKJ1103 ವಿಮಾನವನ್ನು ಮುಂಬೈ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ಇಂಜಿನ್‌ನಲ್ಲಿ ಯಾವುದೇ ತಾಂತ್ರಿಕ ದೋಷ ಪತ್ತೆಯಾಗಿಲ್ಲ. ಮೊದಲ ಎಂಜಿನ್‌ನಲ್ಲಿ ಹಕ್ಕಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.