ಮನೆ ರಾಜ್ಯ ಇಂದೂ ಸಹ ಬೆಂಗಳೂರಲ್ಲಿ ವರುಣ ಆರ್ಭಟ; ಮೇ 1ರವರೆಗೂ ಮಳೆ ಮುನ್ಸೂಚನೆ..!

ಇಂದೂ ಸಹ ಬೆಂಗಳೂರಲ್ಲಿ ವರುಣ ಆರ್ಭಟ; ಮೇ 1ರವರೆಗೂ ಮಳೆ ಮುನ್ಸೂಚನೆ..!

0

ಬೆಂಗಳೂರು : ನೆನ್ನೆ (ಬುಧವಾರ) ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10 ಮಂದಿ ಬಲಿಯಾಗಿದ್ದು, ನಾನಾ ಅವಾಂತರ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಇಂದೂ ಸಹ ಬೆಂಗಳೂರಲ್ಲಿ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಕೂಡ ಕೂಡ ಬೆಂಗಳೂರಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದ್ದು, ಮೇ 1ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೇಸಿಗೆಗೆ ಬೆಂದಿದ್ದ ಬೆಂಗಳೂರಿಗರಿಗೆ ಬುಧವಾರ ಮಳೆರಾಯ ತಂಪೆರೆದಿದ್ದಾನೆ. ಹಲವು ಅವಘಡಗಳ ಜೊತೆ ಭೀಕರ ಮಳೆ 10 ಜನರ ಪ್ರಾಣವನ್ನೂ ಕಸಿದಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು 7 ಜನ ಮೃತಪಟ್ಟಿದ್ದು, ಇನ್ನೂ ಮೂವರು ಪ್ರತ್ಯೇಕ ಘಟನೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.

ನೆನ್ನೆ (ಬುಧವಾರ) ಸುರಿದ ಒಂದೇ ಒಂದು ಧಾರಾಕಾರ ಮಳೆಗೆ ಬೆಂಗಳೂರಿನ ಮರಗಳು ಧರೆಗುರಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. 170ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, 408 ಮರದ ಕೊಂಬೆಗಳು ಮುರಿದು ಬಿದ್ದಿವೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68 ಕಡೆ ಜಲಾವೃತವಾಗಿದೆ. 25 ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ದಾಖಲೆಯ ಮಳೆಯಾಗಿದೆ.