ಚಾಮರಾಜನಗರ(Chamarajanagar): ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಮೇಲೆ ನೆರೆಮನೆಯ ವ್ಯಕ್ತಿಯೇ ಅತ್ಯಾಚಾರವೆಸಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಪೊಲೀಸರು ಆರೋಪಿ ಮರಿಸ್ವಾಮಿ(56) ಎಂಬುವನನ್ನು ಬಂಧಿಸಿದ್ದಾರೆ.
ನೆರೆಮನೆಯಲ್ಲಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯನ್ನು ಈತ ಪುಸಲಾಯಿಸಿ ಅತ್ಯಾಚಾರ ಎಸಗಿದ್ದು, ಬಾಲಕಿಯು ಮನೆಯವರಿಗೆ ಗುರುವಾರ ಮಾಹಿತಿ ತಿಳಿಸಿದ್ದಾಳೆ. ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದಾಗ ವಿದ್ಯಾರ್ಥಿನಿ 5 ತಿಂಗಳ ಗರ್ಭಿಣಿಯಾಗಿರುವುದು ಖಚಿತವಾಗಿದೆ.
ಬಳಿಕ, ವಿಚಾರ ತಿಳಿದ ಮಕ್ಕಳ ಕಣ್ಗಾವಲು ಘಟಕದ ಅಧಿಕಾರಿಗಳು ಮತ್ತೊಮ್ಮೆ ಪರೀಕ್ಷೆ ನಡೆಸಿ ಖಚಿತ ಪಡಿಸಿಕೊಂಡ ನಂತರ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸದ್ಯ ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.