ಮನೆ ಸುದ್ದಿ ಜಾಲ ಬ್ರಿಟನ್ ಪ್ರಧಾನಿಯಾದ ರಿಷಿ ಸುನಕ್: ಮೈಸೂರಿನಲ್ಲಿ ಸಂಭ್ರಮಾಚರಣೆ

ಬ್ರಿಟನ್ ಪ್ರಧಾನಿಯಾದ ರಿಷಿ ಸುನಕ್: ಮೈಸೂರಿನಲ್ಲಿ ಸಂಭ್ರಮಾಚರಣೆ

0

ಮೈಸೂರು(Mysuru): ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್.ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಹಿನ್ನೆಲೆ ಹೆಬ್ಬಾಳ್ ಫೌಂಡೇಶನ್ ವತಿಯಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು.

ನಗರದ ವಿ.ವಿ.ಮೊಹಲ್ಲದಲ್ಲಿರುವ ಎನ್.ಆರ್.ನಾರಾಯಣಮೂರ್ತಿ ಮನೆ ಮುಂದೆ ಜಮಾಯಿಸಿದ ಹೆಬ್ಬಾಳ್ ಫೌಂಡೇಶನ್ ಸದಸ್ಯರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಭಾವಚಿತ್ರ ಹಿಡಿದು ಜಯಘೋಷ ಕೂಗಿದರು.
ಬಳಿಕ ಮಾತನಾಡಿದ ಡಿ.ಮಾದೇಗೌಡರು, 600 ವರ್ಷ ನಮ್ಮ ದೇಶವನ್ನ ಆಳಿದ ಬ್ರಿಟನ್ಗೆ ಭಾರತದ ಅಳಿಯ ಪ್ರಧಾನಿಯಾಗಿ ಆಯ್ಕೆಯಾಗಿರುವುದು ನಮಗೆಲ್ಲಾ ಸಂತಸ ನೀಡಿದೆ. ಅವರು ಮೈಸೂರಿನ ಅಳಿಯ ಕೂಡ ಹೌದು ಎಂದು ಹರ್ಷ ವ್ಯಕ್ತಪಡಿಸಿದರು.