ಬೆಂಗಳೂರು(Bengaluru): ಟ್ವಿಟರ್ ವೆಬ್ ಅಪ್ಲಿಕೇಶನ್ ಮತ್ತು ವೆಬ್ ಪೇಜ್ ತೆರೆದುಕೊಳ್ಳದೇ ಇರುವುದರಿಂದ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ.
ಫೀಡ್ ಪೇಜ್ ಆರಂಭದಲ್ಲಿ ಲೋಡ್ ಆಗುವಾಗ “Something went wrong, but don’t worry – try again” ಎಂಬ ಮೆಸೇಜ್ ಪಾಪ್ ಅಪ್ ಆಗುತ್ತಿದೆ ಎಂದು ಯೂಸರ್ಸ್ ತಿಳಿಸಿದ್ದಾರೆ.
ಟ್ವಿಟರ್’ನ ಈ ತಾಂತ್ರಿಕ ಸಮಸ್ಯೆಯು ಬೆಳಗ್ಗೆ 3 ಗಂಟೆಗೆ ಆರಂಭವಾಗಿದ್ದು, ಬೆಳಗ್ಗೆ 7ರ ಸುಮಾರಿಗೆ ಹೆಚ್ಚಾಗಿತ್ತು ಎನ್ನಲಾಗಿದೆ. ಬಳಕೆದಾರರಿಗೆ ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿ ಲಭ್ಯವಾಗುತ್ತಿಲ್ಲ. ಸ್ಮಾರ್ಟ್’ಫೋನ್ ಆ್ಯಪ್‌ನಲ್ಲಿ ಟ್ವಿಟರ್ ಕಾರ್ಯನಿರ್ವಹಿಸುತ್ತಿದೆ.
ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ಬಳಿಕ ಕಂಪನಿಯಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದ್ದಾರೆ.
ಹೊಸ ಕಾರ್ಯತಂತ್ರದ ಭಾಗವಾಗಿ ಟ್ವಿಟರ್, ವೆರಿಫೈಡ್ ಖಾತೆಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ತಿಂಗಳ ಚಂದಾದಾರಿಕೆ ಶುಲ್ಕವನ್ನು ಟ್ವಿಟರ್ ಬಳಕೆದಾರರಿಗೆ ವಿಧಿಸಲಿದೆ.
ಜತೆಗೆ ಉದ್ಯೋಗ ಕಡಿತಕ್ಕೂ ಮುಂದಾಗಿದ್ದು, ಶುಕ್ರವಾರದಿಂದಲೇ ವಿವಿಧ ಹಂತಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಕಂಪನಿ ಹೇಳಿದೆ.