ಮನೆ ತಂತ್ರಜ್ಞಾನ ಕೈಗೆಟಕುವ ದರದಲ್ಲಿ ಮಾರುಕಟ್ಟೆ ಪ್ರವೇಶಿಸಿದ ಮಾರುತಿ ಸುಜುಕಿ

ಕೈಗೆಟಕುವ ದರದಲ್ಲಿ ಮಾರುಕಟ್ಟೆ ಪ್ರವೇಶಿಸಿದ ಮಾರುತಿ ಸುಜುಕಿ

0

ಈಗಿನ ಕಾಲದಲ್ಲಿ ಜನರು ವಾಹನಗಳನ್ನೇ ಅವಲಂಭಿತವಾಗಿದ್ದಾರೆ. ಮನೆಯಲ್ಲಿ ಕನಿಷ್ಟ ಒಂದಾದರೂ ವಾಹನಗಳನ್ನು ಹೊಂದಿರುತ್ತಾರೆ. ಹಾಗೆಯೇ ಕಾರಿನ ಮೇಲೆ ಹೆಚ್ಚಿನ ವ್ಯಾಮೋಹ ಇರುತ್ತದೆ. ಪ್ರತಿಯೊಬ್ಬರಿಗೂ ದುಬಾರಿ ಕಾರಿನಿಂದ ಹಿಡಿದು ಕಡಿಮೆ ಬೆಲೆ ಕಾರುಗಳನ್ನು ಹೊಂದುವ ಆಸೆ ಎಲ್ಲರಿಗೂ ಇದೆ. ಅದಕ್ಕಾಗಿಯೇ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಹೊಸ ಕಾರೊಂದನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ಕಾರು ಬಹಳಷ್ಟು ಫೀಚರ್ಸ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಪರಿಚಯಿಸುತ್ತಿರುವ ಕಾರು ಬಲೆನೊ ಸಿಎನ್ಜಿ ಎಂಬುದು. ಇದು  ಬಲೆನೊ ಸೀರಿಸ್ನಲ್ಲಿ ಬಿಡುಗಡೆಯಾಗುತ್ತಿರುವ ವಿಶೇಷ ಕಾರಾಗಿದೆ. ಇದು ಹಲವು ಫಿಚರ್ಸ್ ಹೊಂದಿದ್ದು, ಗ್ರಾಹಕರ ಕೈಗೆಟಕುವ ಧರದಲ್ಲಿ ಲಭ್ಯವಾಗಲಿದೆ.

ಎಂಜಿನ್ ಮತ್ತು ಮೈಲೇಜ್

ಹೊಸ ಬಲೆನೊ ಸಿಎನ್ ಜಿ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು 1.2 ಲೀಟರ್ ನ್ಯಾಚುರಲಿ ಆಸ್ಪೆರೆಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಅಳವಡಿಸಿದೆ. ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ಇದು 76 ಬಿಎಚ್ ಪಿ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಪ್ರತಿ ಕೆ.ಜಿ ಸಿಎನ್ ಜಿಗೆ ಗರಿಷ್ಠ 30.61 ಕಿ.ಮೀ ಮೈಲೇಜ್ ಹಿಂದಿರುಗುತ್ತದೆ.

ವಿನ್ಯಾಸ ಮತ್ತು ಫೀಚರ್ಸ್:

ಹೊಸ ಬಲೆನೊ ಸಿಎನ್’ಜಿ ಮಾದರಿಯಲ್ಲಿ ಬ್ಯಾಡ್ಜ್ ಹೊರತಾಗಿ ಸಾಮಾನ್ಯ ಪೆಟ್ರೋಲ್ ಮಾದರಿಯೆಂತೆ ವಿನ್ಯಾಸ ಹೊಂದಿದೆ.

ಮಾರುತಿ ಸುಜುಕಿ ಬಲೆನೊ ಸಿಎನ್’ಜಿ

ಹೊಸ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, 7.0 ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ಕಾರ್ ಕನೆಕ್ಟ್, ಸ್ಟಾರ್ಟ್/ಸ್ಟಾಪ್ ಬಟನ್ ಸೌಲಭ್ಯಗಳಿವೆ.

ಹಾಗೆಯೇ ಈ ಕಾರಿನಲ್ಲಿ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್ ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಿಕ್ ಪವರ್ಡ್ ರಿಯರ್ ವ್ಯೂ ಮಿರರ್, ಪವರ್ ವಿಂಡೋ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

ಸಿಎನ್’ಜಿ ಕಾರು ಮಾರಾಟದಲ್ಲಿ ಮಹತ್ತರ ಸಾಧನೆ:

ಮಾರುತಿ ಸುಜುಕಿಯು ಸಿಎನ್ಜಿ ಕಾರುಗಳ ಮಾರಾಟದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ. ಸುಮಾರು 10 ಕಾರುಗಳಲ್ಲಿ ಸಿಎನ್ ಜಿ ವರ್ಷನ್ನಲ್ಲಿ ಬಿಡುಗಡೆ ಮಾಡಿರುವ ಮಾರುತಿ ಸುಜುಕಿಯು ಇದುವರೆಗೆ ಸುಮಾರು 1 ಮಿಲಿಯನ್ ಗೂ ಅಧಿಕ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇದಲ್ಲದೆ ಮಾರುತಿ ಸುಜುಕಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳಲ್ಲಿ ಸಿಎನ್ ಜಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬೆಲೆ ಮತ್ತು ಲಭ್ಯತೆ:

ಹೊಸ ಬಲೆನೊ ಸಿಎನ್’ಜಿ ಕಾರು ದೆಹಲಿ ಎಕ್ಸ್ ಶೋರೂಂನಲ್ಲಿ ಲಭ್ಯವಿದ್ದು ಇದರ ಪ್ರಕಾರ 8.28 ಲಕ್ಷ ರೂಪಾಯಿ ಆರಂಭಿಕ ಬೆಲೆಯನ್ನು ಹೊಂದಿದೆ. ಹೊಸ ಸಿಎನ್ಜಿ ಮಾದರಿಯು ಸ್ಟ್ಯಾಂಡರ್ಡ್ ಬಲೆನೊ ಕಾರಿನ ಡೆಲ್ಟಾ ಮತ್ತು ಜಿಟಾ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಜೊತೆಗೆ ಇದರ ಆರಂಭಿಕ ಮಾದರಿಯು 8.25 ಲಕ್ಷ ರೂಪಾಯಿ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು 9.29 ಲಕ್ಷ ರೂಪಾಯಿ ಬೆಲೆ ಹೊಂದಿದೆ.

ಹಿಂದಿನ ಲೇಖನನ.11 ರಂದು ರಾಜ್ಯದ ಮೊದಲ ವಂದೇ ಮಾತರಂ ರೈಲಿಗೆ ಮೋದಿ ಚಾಲನೆ
ಮುಂದಿನ ಲೇಖನಟ್ವಿಟರ್‌’ನಲ್ಲಿ ತಾಂತ್ರಿಕ ಸಮಸ್ಯೆ, ಬಳಕೆದಾರರಿಗೆ ತೊಂದರೆ