ಮೈಸೂರು(Mysuru): ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನ ಆವರಣದಲ್ಲಿ ತುಳಸಿ ಪೂಜೆ (ವಿವಾಹ) ಕಾರ್ಯಕ್ರಮ ಶನಿವಾರ ಸಂಭ್ರಮದಿಂದ ಜರುಗಿತು.
ತುಳಸಿ ಕಟ್ಟೆ ಶುಚಿಗೊಳಿಸಿ ಬಣ್ಣ ಹಚ್ಚಲಾಯಿತು ಕಬ್ಬು ಮಾವಿನ ತಳಿರು -ತೋರಣ ಹಾಗೂ ಹೂ ದಂಡೆ , ಮಾಲೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಮಾಡಿದ ಬಳಿಕ ಆನಂತರ ಸಾರ್ವಜನಿಕರಿಗೆ ತುಳಸಿ ಗಿಡವನ್ನು ವಿತರಿಸಿ ತುಳಸಿ ಮಹತ್ವಗಳನ್ನು ತಿಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಎಸ್ ಕೃಷ್ಣಮೂರ್ತಿ, ಹಿಂದೂಗಳಿಗೆ ತುಳಸಿ ಗಿಡ ಎಂದರೆ ಅತ್ಯಂತ ಪವಿತ್ರವಾದ ಗಿಡವಾಗಿದ್ದು, ತುಳಸಿ ಗಿಡ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಶ್ರೀಕೃಷ್ಣನ ಕಾಲದಿಂದಲೂ ತುಳಸಿಗೆ ಎಲ್ಲಾ ಗಿಡಕ್ಕಿಂತ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ ಪ್ರತಿಯೊಂದರಲ್ಲೂ ವಿಭಿನ್ನತೆಯನ್ನು ಹೊಂದಿದೆ. ನಮ್ಮ ಸಂಸ್ಕೃತಿ ಸಂಪ್ರದಾಯ ಶ್ರೀಮಂತಿಕೆಯನ್ನು ಹೊಂದಿದ್ದು, ನಾವು ಆಚರಣೆ ಮಾಡುವ ಪ್ರತಿಯೊಂದು ಹಬ್ಬ ಹರಿದಿನಗಳು ವಿಭಿನ್ನತೆಯೊಂದಿಗೆ ವಿಶೇಷತೆ ಯನ್ನು ಹೊಂದಿದೆ. ಅದರಲ್ಲಿ ತುಳಸಿ ಮದುವೆ ಕೂಡ ಪ್ರಮುಖವಾದದದ್ದು. ಪ್ರತಿವರ್ಷ ತುಳಸಿ ವಿವಾಹವನ್ನು ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಏಕಾದಶಿ ದಿನದಂದು ನೆರವೇರಿಸಲಾಗುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ತುಳಸಿಗಿಡವು ಹಿಂದೂ ಧರ್ಮದಲ್ಲಿನ ಜನರಿಗೆ ಅವಿಭಾಜ್ಯ ಅಂಗ ಮತ್ತು ಇದನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ. ಹಾಗೇ ತುಳಸಿಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ. ಅಂದಿನ ದಿನಗಳಲ್ಲಿ ರಾಯರು ಸಹಾ ತುಳಸಿ ಗಿಡದ ಮಹತ್ವವನ್ನು ಜಗಕ್ಕೆ ಸಾರಿದ್ದರು. ಆದ್ದರಿಂದಲೇ ಅವರು ಬೃಂದಾವನದಲ್ಲಿ ಲೀನವಾದರು ಎಂದು ರಾಯರನ್ನು ಸ್ಮರಿಸಿದರು. ತುಳಸಿ ಗಿಡದ ಎಲೆಗಳನ್ನು ಬಳಸಿದರೆ ಡೆಂಗ್ಯೂ ಕಾಯಿಲೆಯೂ ವಾಸಿಯಾಗುತ್ತದೆ ಎಂದು ಹೇಳಿದರು.
250ಕ್ಕೂ ಹೆಚ್ಚು ಭಕ್ತಾದಿಗಳಿಗೆ ಉಚಿತ ತುಳಸಿ ಗಿಡಗಳನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ನೂರಾರು ಭಕ್ತರು ಹಾಜರಿದ್ದರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.