ಮನೆ ಸಾಹಿತ್ಯ ಡಿ.8 ರಿಂದ 15 ರವರೆಗೆ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’

ಡಿ.8 ರಿಂದ 15 ರವರೆಗೆ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’

0

ಮೈಸೂರು(Mysuru): ರಂಗಾಯಣದಿಂದ ಈ ಬಾರಿಯ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ವನ್ನು ಡಿ.8ರಿಂದ 15ರವರೆಗೆ ನಡೆಸಲು ನಿರ್ಧರಿಸಿರುವುದಾಗಿ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, `ಭಾರತೀಯತೆ’ ವಸ್ತುವಿಷಯದ ಮೇಲೆ ರಂಗೋತ್ಸವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ  ಎಂದು ಮಾಹಿತಿ ನೀಡಿದರು.

ಈ ರಂಗೋತ್ಸವವು ಕೇವಲ ನಾಟಕಗಳ ಪ್ರದರ್ಶನದ ಹಬ್ಬವವಲ್ಲ. ಸಮಾಜಕ್ಕೆ ಕನ್ನಡಿ ಹಿಡಿಯುವ ವಸ್ತುವಿಷಯದ ಆಧಾರದಲ್ಲಿ ನಡೆಯುತ್ತದೆ. ಹೀಗಾಗಿ, ರಾಷ್ಟ್ರಪ್ರೇಮದ ಪಾಂಚಜನ್ಯ ಮೊಳಗಬೇಕು ಎಂಬ ಉದ್ದೇಶದಿಂದ ಭಾರತೀಯತೆ ಶೀರ್ಷಿಕೆ ಆಯ್ಕೆ ಮಾಡಲಾಗಿದೆ ಎಂದರು.

ದೇಶದ ಮಹಾಪುರುಷರನ್ನು ಮತ್ತು ದಿವ್ಯ ಪರಂಪರೆಯನ್ನು ನಮ್ಮ ಜನ ನಿರಾಕರಿಸುವಂತಹ ಸ್ಥಿತಿಯನ್ನು ತಂದ ಮೆಕಾಲೆವಾದಿಗಳ, ಮತಾಂತರಿ ಮಿಷನರಿಗಳ, ಉಗ್ರಗಾಮಿಗಳ ಅಭಿಮಾನಿಗಳನ್ನು, ಇವುಗಳನ್ನೇ ಜಾತ್ಯತೀತ ಎನ್ನುವ ಡೋಂಗಿಗಳ ಅಪಾಯಕಾರಿ ಬೌದ್ಧಿಕ ರಿವಾಜುಗಳನ್ನ ಬದಲಿಸಬೇಕಿದೆ. ಇಂತಹ ವಾದಿಗಳ ವಾದವನ್ನು ತಿರಸ್ಕರಿಸಿ ಮತ್ತು ನಿಷ್ಕ್ರಿಯಗೊಳಿಸಿ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ಮನಸ್ಸು ಮಾಡಬೇಕಿರುವುದು ಇಂದಿನ ಅನಿವಾರ್ಯವಾಗಿದೆ. ಈ ಆಶಯದಲ್ಲಿ ರಂಗೋತ್ಸವವನ್ನು ನಡೆಸಲಾಗುವುದು ಎಂದರು.

ನಾಟಕಗಳು, ಚಲನಚಿತ್ರೋತ್ಸವ, ಜನಪದೋತ್ಸವ, ವಿಚಾರಸಂಕಿರಣವನ್ನು ಉತ್ಸವ ಒಳಗೊಂಡಿರಲಿದೆ ಎಂದು ಹೇಳಿದರು.