ಮನೆ ಅಪರಾಧ ಶಿರಸಿ: ಶಾಲಾ ಬಸ್ ಪಲ್ಟಿ- ಮಹಿಳೆ ಸಾವು

ಶಿರಸಿ: ಶಾಲಾ ಬಸ್ ಪಲ್ಟಿ- ಮಹಿಳೆ ಸಾವು

0

ಶಿರಸಿ: ಖಾಸಗಿ ಶಾಲೆಯ ಬಸ್ ಪಲ್ಟಿಯಾದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಬುಗುಡಿಕೊಪ್ಪ ಸಮೀಪ ಶುಕ್ರವಾರ ನಡೆದಿದೆ.

ರಾಣೆಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರ ಶಾಲೆಯ ಸಿಬ್ಬಂದಿ ಕಸ್ತೂರಮ್ಮ (60) ಮೃತರು.

ರಜೆ ಇದ್ದ ಕಾರಣ ಶಾಲೆಯ ಸಿಬ್ಬಂದಿ ರಾಣೆಬೆನ್ನೂರಿನಿಂದ ಶಿರಸಿಗೆ ಪ್ರವಾಸ ನಿಮಿತ್ತ ಬರುವ ವೇಳೆ ದುರ್ಘಟನೆ ಸಂಭವಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬನವಾಸಿ ಠಾಣೆ ಪೊಲೀಸರು, ಬಸ್ ನಲ್ಲಿ ಒಟ್ಟೂ 13 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಒಬ್ಬರು ಮೃತಪಟ್ಟು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.