ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣ ಭೀತಿ ಹಿನ್ನೆಲೆಯಲ್ಲಿ ತನ್ನ ಪ್ರಜೆಗಳನ್ನು ಕರೆತರಲು ಭಾರತ ಮುಂದಾಗಿದೆ.
ಭಾರತೀಯರನ್ನು ಕರೆತರಲು ಮೂರು ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಆದರಂತೆ ಏರ್ ಇಂಡಿಯಾ ವಿಶೇಷ ವಿಮಾನವು ಇಂದು (ಫೆ.22) ಬೆಳಿಗ್ಗೆ ಭಾರತದಿಂದ ಉಕ್ರೇನ್ಗೆ ಹೊರಟಿದೆ.
ಉಕ್ರೇನ್ ತೊರೆಯಲು ಇಚ್ಚಿಸಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಟಾಟಾ ಒಡೆತನದ ಏರ್ ಇಂಡಿಯಾದ ಮೂರು ವಿಮಾನಗಳಲ್ಲಿ ಒಂದು ವಿಮಾನ ಇಂದು ರಾತ್ರಿಯೇ ನಾಗರಿಕರನ್ನು ಕರೆತರಲಿದೆ ಎಂದು ವಿಮಾನಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.
ಉಕ್ರೇನ್ನಿಂದ ಭಾರತಕ್ಕೆ ಮರಳಲು ಇಚ್ಚಿಸಿದ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಇವು ಫೆಬ್ರವರಿ 22, 24, 26 ರಂದು ಕಾರ್ಯಾಚರಣೆ ನಡೆಸಲಿವೆ.
ಇದಲ್ಲದೇ, ದೆಹಲಿಯಿಂದ ಬೋಯಿಂಗ್ ಡ್ರೀಮ್ಲೈನರ್ ಬಿ-787 ವಿಮಾನವು ಉಕ್ರೇನ್ಗೆ ಇಂದು ಹೊರಟಿದೆ. ಇದು 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.