ಮನೆ ಯೋಗಾಸನ ಕಿಡ್ನಿ ಆರೋಗ್ಯ ಕಾಪಾಡಲು ಮಾಡಬೇಕಾದ ನಾಲ್ಕು ಯೋಗಾಸನಗಳು

ಕಿಡ್ನಿ ಆರೋಗ್ಯ ಕಾಪಾಡಲು ಮಾಡಬೇಕಾದ ನಾಲ್ಕು ಯೋಗಾಸನಗಳು

0

ಯೋಗ ಹಾಗೂ ಧ್ಯಾನವು ದೇಹದ ಬಾಹ್ಯ ಹಾಗೂ ಆಂತರಿಕವಾಗಿಯೂ ರಕ್ಷಿಸುವುದು. ಪ್ರತಿನಿತ್ಯವೂ ಯೋಗಾಭ್ಯಾಸ ಮಾಡಿದರೆ, ಅದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಮ್ಮ ದೇಹದಲ್ಲಿನ ಪ್ರತಿಯೊಂದು ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ, ಆಗ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದು. ಪ್ರಮುಖವಾಗಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕಲು ಕಿಡ್ನಿಯ ಕಾರ್ಯವು ಮಹತ್ವದ್ದಾಗಿದೆ.

ಕಿಡ್ನಿಯ ಕಾರ್ಯನಿರ್ವಹಣೆ ಮೇಲೆ ಯಾವುದೇ ರೀತಿಯ ಪರಿಣಾಮವಾದರೂ ಅದು ಸಂಪೂರ್ಣ ದೇಹಕ್ಕೆ ಹಾನಿ ಉಂಟು ಮಾಡುವುದು. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡುವುದು ಅತೀ ಅಗತ್ಯ. ನಮ್ಮ ಆಹಾರ ಕ್ರಮದೊಂದಿಗೆ ಕೆಲವೊಂದು ಯೋಗಾಸನಗಳನ್ನು ಮಾಡಿದರೆ, ಅದರಿಂದ ಕಿಡ್ನಿಯ ಆರೋಗ್ಯ ಕಾಪಾಡಬಹುದು. ಇಂತಹ ನಾಲ್ಕು ಆಸನಗಳ ಬಗ್ಗೆ ನಾವಿಲ್ಲಿ ನಿಮಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ.

ಧುನರಾಸನ

ರಕ್ತದಲ್ಲಿರುವಂತಹ ವಿಷಕಾರಿ ಅಂಶವನ್ನು ಹೊರಹಾಕುವಲ್ಲಿ ಕಿಡ್ನಿಯು ತುಂಬಾ ಕೆಲಸ ಮಾಡುವುದು. ಹೀಗಾಗಿ ಅದರ ಕಾರ್ಯಕ್ಕೆ ಸ್ವಲ್ಪ ತೊಂದರೆ ಆದರೂ ಅದು ಸಂಪೂರ್ಣ ದೇಹದ ಸಮತೋಲನ ಬಿಗಡಾಯಿಸುವುದು. ಕಿಡ್ನಿಯ ಆರೋಗ್ಯ ಕಾಪಾಡಲು ಮುಖ್ಯವಾಗಿ ನೀವು ಧನುರಾಸನ ಮಾಡಬಹುದು ಮತ್ತು ಇದು ಯಾವುದೇ ರೀತಿಯ ಕಿಡ್ನಿಯ ಸಮಸ್ಯೆಗಳು ಬರದಂತೆ ತಡೆಯಲು ಸಹಕಾರಿ.

ಮಾಡುವ ಕ್ರಮ

• ಕಾಲುಗಳನ್ನು ಹಾಗೆ ಸ್ವಲ್ಪ ಅಗಲವಾಗಿಸಿ, ನೆಲದಲ್ಲಿ ಹೊಟ್ಟೆಯ ಮೇಲೆ ಮಲಗಿ ಮತ್ತು ಕೈಗಳನ್ನು ಹಾಗೆ ದೇಹದ ಬದಿಯಲ್ಲಿಡಿ. ಪಾದಗಳನ್ನು ಕೈಗಳಿಂದ ಹಿಡಿದುಕೊಂಡು ಹಾಗೆ ಮೊಣಕಾಲನ್ನು ಬಗ್ಗಿಸಿ.

• ನೆಲದಲ್ಲಿ ಹೊಟ್ಟೆ ಮೇಲೆ ಮಲಗಿ ಮತ್ತು ಕಾಲುಗಳನ್ನು ಅಗಲವಾಗಿಡಿ ಮತ್ತು ಕೈಗಗಳು ಹಾಗೆ ದೇಹದ ಬದಿಯಲ್ಲಿರಲಿ. ಪಾದಗಳನ್ನು ಕೈಗಳಿಂದ ಹಿಡಿದು ಮೊಣಕಾಲುಗಳನ್ನು ಮಡಚಿ.

• ಉಸಿರನ್ನು ಎಳೆಯುತ್ತಾ ಹಾಗೆ ಎದೆಯನ್ನು ನೆಲದಿಂದ ಮೇಲಕ್ಕೆತ್ತಿ ಮತ್ತು ಕಾಲುಗಳನ್ನು ಮೇಲಕ್ಕೆ ಹಾಗೂ ಹಿಂದಕ್ಕೆ ಎತ್ತಿ.

• ಉಸಿರಿನ ಕಡೆ ಗಮನ ನೀಡಿ ಮತ್ತು ಇದೇ ಭಂಗಿಯಲ್ಲಿರಿ. ಇದರ ಬಳಿಕ ಆರಾಮವಾಗಿ ಮತ್ತು ದೀರ್ಘವಾಗಿ ಉಸಿರಾಡಿ.

• 15-20 ಸೆಕೆಂಡು ಬಳಿಕ ಉಸಿರನ್ನು ಬಿಡುತ್ತಾ ಎದೆ ಹಾಗೂ ಕಾಲುಗಳನ್ನು ನೆಲದ ಮೇಲೆ ತನ್ನಿ. ಇದ ಬಳಿಕ ಮೊಣಕಾಲನ್ನು ನೇರವಾಗಿಸಿ ಮತ್ತು ಆರಾಮವಾಗಿಡಿ.

ಪಶ್ಚಿಮೊತ್ತಾಸನ

ಯೋಗದ ಪ್ರಮುಖ ಲಾಭವೆಂದರೆ ಅದು ದೇಹದೊಳಗಿನ ಅಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು. ಮುಂದೆ ಬಾಗುವಂತಹ ಪಶ್ಚಿಮೊತ್ತಾಸನವು ಉಸಿರು ಸರಿಯಾಗಿ ಹೋಗಲು ಮತ್ತು ಕಿಡ್ನಿಯ ಕೆಲಸ ಉತ್ತೇಜಿಸಲು ಹಾಗೂ ಜೀರ್ಣಕ್ರಿಯೆಗೆ ಸಹಕಾರಿ.

ಇದನ್ನು ಮಾಡುವ ವಿಧಾನ

• ನೇರವಾಗಿ ಕುಳಿತುಕೊಳ್ಳಿ ಮತ್ತು ಕಾಲುಗಳು ಜತೆಯಾಗಿರಲಿ. ಕಾಲುಗಳನ್ನು ಹಾಗೆ ಮುಂದಕ್ಕೆ ಚಾಚಿ ಮತ್ತು ಪಾದವು ಛಾವಣಿ ನೋಡುತ್ತಿರಲಿ.

• ಉಸಿರು ತೆಗೆದುಕೊಳ್ಳುತ್ತಾ ಕೈಗಳನ್ನು ಹಾಗೆ ಮೇಲಕ್ಕೆತ್ತಿ. ಹಾಗೆ ಬೆನ್ನನ್ನು ನೇರವಾಗಿ ಇಟ್ಟುಕೊಂಡು, ಉಸಿರು ಬಿಡುತ್ತಾ ಕಾಲಿನ ಹೆಬ್ಬೆರಳಿನ ತನಕ ಬಾಗಿ. ಹೆಬ್ಬೆರಳನ್ನು ಹಾಗೆ ತೋರುಬೆರಳು ಮತ್ತು ಹೆಬ್ಬೆರಳಿನಿಂದ ಹಿಡಿಯಿರಿ.

• ಉಸಿರು ಬಿಡುತ್ತಾ ನಿಧಾನವಾಗಿ ಮೊಣಕಾಲಿಗೆ ಹಣೆಯನ್ನು ಸ್ಪರ್ಶಿಸಲು ಪ್ರಯತ್ನಿಸಿ. ಈ ವೇಳೆ ಮೊಣಕೈಗಳು ನೆಲಕ್ಕೆ ತಾಗಿರಬೇಕು.

• ಉಸಿರು ಹಿಡಿದು ಇದೇ ಭಂಗಿಯಲ್ಲಿ ನೀವು 10-20 ನಿಮಿಷ ಕಾಲ ಹಾಗೆ ಇರಿ.

• ಉಸಿರು ತೆಗೆದುಕೊಳ್ಳುತ್ತಾ ಮೊದಲಿನ ಭಂಗಿಗೆ ಬನ್ನಿ.

ಮೇರುದಂಡಾಸನ

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಸಂದರ್ಭದಲ್ಲಿ ದೇಹದಲ್ಲಿ ಹೆಚ್ಚುವರಿ ಆಗಿದ್ದ ದ್ರವಾಂಶವು ಹೊರಗೆ ಹೋಗದೆ, ಗ್ರಂಥಿಗಳು ಊದಿಕೊಳ್ಳುವುದು. ಇದರಿಂದಾಗಿ ನಿಶ್ಯಕ್ತಿಯು ಕಾಡುವುದು.

ಮೇರುದಂಡಾಸನವು ಹೊಟ್ಟೆಯ ಭಾಗದ ಅಂಗಾಂಗಗಳನ್ನು ಬಲಪಡಿಸುವುದು, ಅದರಲ್ಲೂ ಮುಖ್ಯವಾಗಿ ಕಿಡ್ನಿಯ ಶಕ್ತಿ ವೃದ್ಧಿಸುವುದು. ಜೀರ್ಣಕ್ರಿಯೆಯು ಸರಾಗವಾಗಿ ಆಗದು ಮತ್ತು ದೇಹವು ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ಇದು ನೆರವಾಗುವುದು.

ಆಸನ ಮಾಡುವ ವಿಧಾನ

• ನೇರವಾಗಿ ಕುಳಿತುಕೊಳ್ಳಿ ಮತ್ತು ಕಾಲುಗಳನ್ನು ಹಾಗೆ ಎರಡು ಕಡೆ ಚಾಚಿ. ಈಗ ಹಾಗೆ ಹಿಂದಕ್ಕೆ ಬಾಗಿ ಮತ್ತು ದೇಹದ ಸಮತೋಲನ ಕಾಪಾಡಿ.

• ಉಸಿರನ್ನು ಎಳೆದುಕೊಳ್ಳಿ ಮತ್ತು ಕಾಲುಗಳನ್ನು ಹಾಗೆ ಮೇಲಕ್ಕೆತ್ತಿ ಮತ್ತು ಬೆನ್ನು ನೇರವಾಗಿ ಇರಲಿ.

• ಕೈಗಳನ್ನು ಮೇಲಕ್ಕೆತ್ತಿ ಮತ್ತು ಎರಡು ಕಾಲುಗಳ ಹೆಬ್ಬೆರಳನ್ನು ಹಿಡಿಯಲು ಪ್ರಯತ್ನಿಸಿ. ಕಾಲುಗಳನ್ನು ಎಷ್ಟು ಒತ್ತಲು ಸಾಧ್ಯವೋ ಅಷ್ಟು ಒತ್ತಿ.

• 15-20 ಸೆಕೆಂಡು ಕಾಲ ಹಾಗೆ ಇರಿ ಮತ್ತು ನಿಧಾನವಾಗಿ ಉಸಿರಾಡಿ.

• ಉಸಿರನ್ನು ಬಿಡಿ ಮತ್ತು ಕಾಲು ಹಾಗೂ ಕೈಗಳನ್ನು ಮೊದಲ ಸ್ಥಾನಕ್ಕೆ ತನ್ನಿ.

ಅರ್ಧ ಮತ್ಸ್ಯೇಂದ್ರಾಸನ

ಅರ್ಧ ಮತ್ಸ್ಯೇಂದ್ರಾಸನವು ಕಿಡ್ನಿ ಮತ್ತು ಯಕೃತ್ ನ ಕಾರ್ಯವನ್ನು ಉತ್ತೇಜಿಸಿ, ದೇಹದಿಂದ ವಿಷಕಾರಿ ಅಂಶಗಳು ಹೊರಗೆ ಹೋಗುವಂತೆ ಮಾಡುವುದು. ದೇಹವನ್ನು ಹಾಗೆ ಮೊದಲಿನ ಸ್ಥಾನಕ್ಕೆ ತಂದ ವೇಳೆ ಅಂಗಾಂಗಗಳಿಗೆ ಹೊಸ ರಕ್ತವು ಪ್ರವೇಶವಾಗುವುದು. ಇದರಿಂದ ಅಂಗಾಂಶಗಳಿಗೆ ಪೋಷಣೆ ಹಾಗೂ ಆಮ್ಲಜನಕವು ಲಭ್ಯವಾಗುವುದು.

ಮಾಡುವ ವಿಧಾನ

• ನೇರವಾಗಿ ಕುಳಿತುಕೊಳ್ಳಿ ಮತ್ತು ಕಾಲುಗಳನ್ನು ಹಾಗೆ ನೇರವಾಗಿ ಮುಂದಕ್ಕೆ ಚಾಚಿ. ಪಾದಗಳು ಜತೆಯಾಗಿ ಇರಲಿ ಮತ್ತು ಬೆನ್ನು ನೇರವಾಗಿ.

• ಈಗ ಎಡದ ಕಾಲನ್ನು ಹಾಗೆ ಮಡಚಿ ಮತ್ತು ಹಿಂಗಾಲು ಪೃಷ್ಠವನ್ನು ಸ್ಪರ್ಶಿಸುವಂತೆ ಮಾಡಬೇಕು.

• ಈಗ ಬಲದ ಕಾಲನ್ನು ಎಡ ಮೊಣಕಾಲಿನ ಮೇಲೆ ತನ್ನಿ. ಹೀಗೆ ಮಾಡುವ ವೇಳೆ ಕೈಗಳನ್ನು ಬದಲ ಮೊಣಕಾಲಿನ ಮೇಲಿಡಿ ಮತ್ತು ಬಲದ ಕೈಯು ಬೆನ್ನಿನ ಹಿಂದೆ ಇರಬೇಕು.

• ಸೊಂಟ, ಕುತ್ತಿ ಮತ್ತು ಭುಜವನ್ನು ಹಾಗೆ ಬಲದ ಬದಿಗೆ ತಿರುಗಿಸಿ ಮತ್ತು ಬಲದ ಭುಜದ ಕಡೆಗೆ ದೃಷ್ಟಿ ಇರಲಿ. ಈ ಭಂಗಿಯಲ್ಲಿ ಹಾಗೆ ಇರಿ ಮತ್ತು ನಿಧಾನವಾಗಿ ಉಸಿರಾಡಿ.

• ಉಸಿರನ್ನು ಬಿಡುತ್ತಾ ಹಾಗೆ ಮೊದಲಿನ ಸ್ಥಾನಕ್ಕೆ ಬನ್ನಿ. ಮೊದಲಿಗೆ ಬಲದ ಕೈಯನ್ನು ಬಿಡುಗಡೆ ಮಾಡಿ, ಇದರ ಬಳಿಕ ಹೊಟ್ಟೆ, ಎದೆ, ಕೊನೆಗೆ ಕುತ್ತಿಗೆ ತಿರುಗಿಸಿ. ಸರಿಯಾಗಿ ಕುಳಿತುಕೊಳ್ಳಿ ಮತ್ತು ಮತ್ತೊಂದು ಬದಿಗೂ ಹೀಗೆ ಮಾಡಿ.

• ಕೆಲವು ಕಿಡ್ನಿ ಸಮಸ್ಯೆಗಳು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಸಣ್ಣ ಕಲ್ಲುಗಳು ಹಾಗೆ ಮೂತ್ರದಲ್ಲಿ ಹೊರಗೆ ಹೋಗುವುದು. ಸೊಂಟದ ಭಾಗದಲ್ಲಿ ಹಠಾತ್ ಆಗಿ ನೋವು, ಮೂತ್ರ ವಿಸರ್ಜನೆಗೆ ಅವಸರ ಮತ್ತು ಮೂತ್ರದ ಬಣ್ಣದ ಬದಲಾವಣೆಯು ಕಿಡ್ನಿ ಸಮಸ್ಯೆಯ ಕೆಲವು ಲಕ್ಷಣಗಳು. ದೇಹದಿಂದ ವಿಷಕಾರಿ ಅಂಶವನ್ನು ಹೊರಗೆ ಹಾಕಲು ನೀರು ಒಳ್ಳೆಯ ಪರಿಹಾರ. ಯೋಗಾಸನದ ಜತೆಗೆ ಒಳ್ಳೆಯ ರೀತಿಯಲ್ಲಿ ಉಸಿರಾಟದ ಅಭ್ಯಾಸ ಮಾಡಿದರೆ, ಅದರಿಂದ ಕಿಡ್ನಿಯ ಆರೋಗ್ಯ ಕಾಪಾಡಬಹುದು.