ಮನೆ ದೇವರ ನಾಮ ಶರಣು ಶರಣು ಜಯ ದುರ್ಗೆ

ಶರಣು ಶರಣು ಜಯ ದುರ್ಗೆ

0

ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ ಶರಣು ಶರಣು ಶಿವೆ ಗೌರಿ ರಕ್ಷಿಸೆಮ್ಮ ಸುಖದಾತೆ ||

ಮಂಗಳವಾರ ಸುಮಂಗಲಿಯರು ನಿನ್ನಯ ನಾಮವ ಭಜಿಸುವರು |

ಒಂಭತ್ತು ವಾರ ವೃತವಿರಲು ದೊರಕುವುದು ಇಷ್ಟಾರ್ಥಗಳು ||

ರಕ್ಷಿಸುವವಳು ನೀನೇ ಶಿಕ್ಷಿಸುವವಳು ನೀನೇ.

ಅಣು ಅಣುವೆಲ್ಲಾ ತುಂಬಿಹೆ ನೀನೇ ಕೋರಿಕೆ ಕರುಣಿಸು ಕಾಮಧೇನು ||

ಜಯ ಶಿವೆ ಶಂಕರಿ ಜಯ ಅಭಯಂಕರಿ ಜಯ ಜಯ ಶಕ್ತಿ ಜಯ ಪ್ರಳಯಂಕರಿ |

ಜಯ ಶಿವೆ ಶಾಂಭವಿ ಜಯ ನಟ ಭೈರವಿ |

 ಜಯ ಕಾದಂಬರಿ ಜಯ ಶ್ವೇತಾಂಬರಿ ||

ಜಯ ಮಾತಾಂಗಿನಿ ಆನಂದದಾಯಿನಿ |

ಜಯ ಜಗದಂಬೆ ಪುಣ್ಯ ಸ್ವರೂಪಿಣಿ |

ಓಂ ಜಗಜನನಿ ಮಾತಾಭವಾನಿ |

ಓಂಕಾರೇಶ್ವರಿ ಚಿತ್ತ ನಿವಾಸಿನಿ ||

ಹಿಂದಿನ ಲೇಖನಜಾಗತಿಕ ಮಟ್ಟದಲ್ಲಿ ವಿವಿಗಳ ಮೌಲ್ಯಮಾಪನ: ಮೈಸೂರು ವಿಶ್ವ ವಿದ್ಯಾನಿಲಯಕ್ಕೆ 110ನೇ ಸ್ಥಾನ
ಮುಂದಿನ ಲೇಖನಕಿಡ್ನಿ ಆರೋಗ್ಯ ಕಾಪಾಡಲು ಮಾಡಬೇಕಾದ ನಾಲ್ಕು ಯೋಗಾಸನಗಳು