ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆಯ ಮಧ್ಯೆಯೂ ಕರ್ನಾಟಕ ವಿಧಾನಮಂಡಲದವರ ಸಂಬಳ, ನಿವೃತ್ತಿ ವೇತನ ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2022 ವಿಧಾನಸಭೆಯಲ್ಲಿ ಇಂದು ಮಂಡನೆಯಾಗಿ ಅಂಗೀಕಾರಗೊಂಡಿತು.
ಈ ವಿಧೇಯಕದಿಂದ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷ, ಸಭಾಪತಿ, ಉಪ ಸಭಾಪತಿ, ಮುಖ್ಯಮಂತ್ರಿ, ಸಚಿವರು, ಪ್ರತಿಪಕ್ಷದ ನಾಯಕ, ಶಾಸಕರು ಹಾಗೂ ಸಚೇತಕರಿಗೂ ಸಂಬಳ, ಭತ್ಯೆ ಹೆಚ್ಚಳವಾಗಲಿದೆ.
ಮುಖ್ಯಮಂತ್ರಿ, ಸಚಿವರ ಸಂಬಳ ಶೇ. 50 ರಷ್ಟು ಹೆಚ್ಚಳ. ಈ ಪ್ರಕಾರ ಸಿಎಂಗೆ ಪ್ರತಿ ತಿಂಗಳು ಇದ್ದ 50 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಳ.ಸಂಪುಟ ದರ್ಜೆ ಸಚಿವರಿಗೆ ಪ್ರತಿ ತಿಂಗಳಿಗೆ 40 ಸಾವಿರ ಇದ್ದ ಸಂಬಳ 60ಸಾವಿರ ರೂ.ಗಳಿಗೆ ಹೆಚ್ಚಳ.ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಆತಿಥ್ಯ ಭತ್ಯೆ 3 ಲಕ್ಷದಿಂದ 4.50 ಲಕ್ಷ ರೂ.ಗೆ ಹೆಚ್ಚಳ.ಕ್ಯಾಬಿನೆಟ್ ದರ್ಜೆ ಸಚಿವರ ಮನೆ ಬಾಡಿಗೆ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ ಹೆಚ್ಚಳ.ಕ್ಯಾಬಿನೆಟ್ ದರ್ಜೆ ಸಚಿವರ ಮನೆ ನಿರ್ವಹಣೆ ವೆಚ್ಚ 20 ಸಾವಿರದಿಂದ 30ಸಾವಿರಕ್ಕೆ ಹೆಚ್ಚಳ.ಕ್ಯಾಬಿನೆಟ್ ದರ್ಜೆ ಸಚಿವರ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ 1 ಸಾವಿರ ಲೀಟರ್ ಪೆಟ್ರೋಲ್ನಿಂದ 2 ಸಾವಿರ ಲೀಟರ್ಗೆ ಹೆಚ್ಚಳ ಮಾಡಲಾಗಿದೆ.