ಮನೆ ಅಪರಾಧ ಬೇಕರಿ ಮಾಲೀಕನ ಕಿಡ್ನಾಪ್: ಆರೋಪಿಗಳ ಬಂಧನ

ಬೇಕರಿ ಮಾಲೀಕನ ಕಿಡ್ನಾಪ್: ಆರೋಪಿಗಳ ಬಂಧನ

0

ವಿಜಯಪುರ: ಪಟ್ಟಣದಲ್ಲಿ ಬೇಕರಿ ಮಾಲೀಕನೊಬ್ಬನನ್ನು ಕಿಡ್ನಾಪ್ ಮಾಡಿದ್ದಲ್ಲದೇ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಮಾನ್​ಸಿಂಗ್​ ಕಿಡ್ನಾಪ್​ ಆಗಿ ಹಲ್ಲೆಗೊಳಗಾದವರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮಾನ್​ಸಿಂಗ್​ರನ್ನು ರಕ್ಷಿಸಿ ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಹಿನ್ನೆಲೆ: ನಿನ್ನೆ ಸಂಜೆ 6.30 ರ ಸುಮಾರಿನಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಮಾನ್​ಸಿಂಗ್​ರ ಬೇಕರಿ ಅಂಗಡಿಗೆ ಬಂದ ದುಷ್ಕರ್ಮಿಗಳು ಸ್ವೀಟ್​ ಆರ್ಡರ್​ ಕೊಡುವ ನೆಪದಲ್ಲಿ ಮಾನ್​ಸಿಂಗ್​ರನ್ನು ಕಾರಿನ ಹತ್ತಿರ ಕರೆದಿದ್ದಾರೆ. ಹತ್ತಿರ ಬಂದ ಮಾನ್​ಸಿಂಗ್​ರನ್ನು ಕಾರಿನೊಳಗೆ ಎಳೆದುಕೊಂಡು ಅಪಹರಣ ಮಾಡಿದ್ದಾರೆ.

ಬಳಿಕ ಮಾನ್​ಸಿಂಗ್​ರ ಕುಟುಂಬಸ್ಥರಿಗೆ ಕರೆ ಮಾಡಿ 50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಕುಟುಂಬಸ್ಥರು 20 ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಝಳಕಿ ಬಳಿ ಬಂದು ಹಣ ನೀಡುವಂತೆ ಅಪಹರಣಕಾರರು ಸೂಚಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ: ಬೇಕರಿ ಮಾಲೀಕ ಮಾನ್​ಸಿಂಗ್​ರ ಅಪಹರಣದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಝಳಕಿ ಬಳಿ 20 ಲಕ್ಷ ನೀಡುವಂತೆ ಬೇಡಿಕೆ ಇಟ್ಟ ಬಗ್ಗೆ ತಿಳಿಸಿದ್ದಾರೆ. ಅದರಂತೆ ಅಪಹರಣಕಾರರ ಸೆರೆ ಹಿಡಿಯಲು ಪೊಲೀಸರು ಯೋಜನೆ ರೂಪಿಸಿದ್ದಾರೆ. 20 ಲಕ್ಷ ರೂಪಾಯಿ ಸಮೇತ ಕುಟುಂಬಸ್ಥರ ಜೊತೆಗೆ ಪೊಲೀಸರು ಅಡಗಿ ಕುಳಿತಿದ್ದರು.

ಝಳಕಿ ಬಳಿ ಮಾನ್​ಸಿಂಗ್​ ಕುಟುಂಬಸ್ಥರ ಬಳಿ ಹಣ ಪಡೆಯಲು ದುಷ್ಕರ್ಮಿಗಳು ಬಂದಾಗ ಪೊಲೀಸರನ್ನು ಗಮನಿಸಿ ಪರಾರಿಯಾಗಿದ್ದು,  ಕಾರು ಬೆನ್ನತ್ತಿದ ಪೊಲೀಸರು ಲೋಣಿ ಬಳಿ ಅಪಹರಣಕಾರರನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನವಿಧಾನಸಭೆಯಲ್ಲಿ ವಿಧಾನಮಂಡಲದವರ ಸಂಬಳ, ನಿವೃತ್ತಿ ವೇತನ ವಿಧೇಯಕ ಮಂಡನೆ: ಅಂಗೀಕಾರ
ಮುಂದಿನ ಲೇಖನದ್ವಿತೀಯ ಪಿಯುಸಿ ಆಂಗ್ಲಭಾಷೆ ಕೈಪಿಡಿ ಬಿಡುಗಡೆ