ಮನೆ ಸುದ್ದಿ ಜಾಲ ಗದಗದಲ್ಲಿ ಪ್ರೌಢಶಾಲೆಗೆ ನುಗ್ಗಿದ ನರಿ: ಅರಣ್ಯ ಇಲಾಖೆಯಿಂದ ಸೆರೆ

ಗದಗದಲ್ಲಿ ಪ್ರೌಢಶಾಲೆಗೆ ನುಗ್ಗಿದ ನರಿ: ಅರಣ್ಯ ಇಲಾಖೆಯಿಂದ ಸೆರೆ

0

ಮುಳಗುಂದ (ಗದಗ ಜಿಲ್ಲೆ): ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಆವರಣಕ್ಕೆ ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ನರಿಯೊಂದು ನುಗ್ಗಿದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಸುದ್ದಿ ತಿಳಿದು ಶಾಲೆಗೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿ, ಕೆಲವೇ ಕ್ಷಣದಲ್ಲಿ ನರಿ ಸೆರೆ ಹಿಡಿದು ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದರು.

ಗ್ರಾಮದ ಪಕ್ಕದಲ್ಲೆ ಗುಡ್ಡ ಅರಣ್ಯ ಪ್ರದೇಶವಿದ್ದು, ನರಿಗಳ ವಾಸಸ್ಥಾನಗಳಿವೆ. ಸಾಮನ್ಯವಾಗಿ ಹೊರ ವಲಯದಲ್ಲಿ ಕಂಡು ಬರುತ್ತವೆ ಎಂದು ಸ್ಥಳೀಯರು ಮಾಹಿತಿ ನೀಡಿದರು.