ಮನೆ ಯೋಗಾಸನ ಕಣ್ಣಿನ ಆರೋಗ್ಯಕ್ಕೆ ಈ ಯೋಗಾಸನಗಳನ್ನು ಟ್ರೈ ಮಾಡಿ ನೋಡಿ

ಕಣ್ಣಿನ ಆರೋಗ್ಯಕ್ಕೆ ಈ ಯೋಗಾಸನಗಳನ್ನು ಟ್ರೈ ಮಾಡಿ ನೋಡಿ

0

ದಿನವಿಡಿ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡುವ ಪರಿಣಾಮವಾಗಿ ಮತ್ತು ಮೊಬೈಲ್ ನೋಡುತ್ತಲಿದ್ದರೂ ಕಣ್ಣುಗಳ ಮೇಲೆ ಒತ್ತಡ ಬೀಳುವುದು. ಅದರಲ್ಲೂ ಲಾಕ್ ಡೌನ್ ಬಳಿಕ ಜನರು ಮನೆಯಲ್ಲೇ ಕುಳಿತು ಕೆಲಸ ಮಾಡಲು ಆರಂಭಿಸಿದ ಬಳಿಕ ಈ ಸಮಸ್ಯೆಯು ಅತಿಯಾಗುತ್ತಿದೆ.


ಇಂತಹ ಸಮಸ್ಯೆಗೆ ಕಾರಣವೆಂದರೆ ಸರಿಯಾದ ಬೆಳಕಿನ ಅಭಾವ, ಕುಳಿತುಕೊಳ್ಳುವ ಭಂಗಿ ಮತ್ತು ನಮ್ಮ ಆಹಾರ ಕ್ರಮ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು. ಕಂಪ್ಯೂಟರ್ ಮುಂದೆ ಕುಳಿತು ಕಣ್ಣುಗಳಿಗೆ ಒತ್ತಡ ಬೀಳುವುದು. ಇದರಿಂದ ಕಣ್ಣಿನ ಆರೋಗ್ಯವು ಕೆಡುತ್ತದೆ ಮತ್ತು ಆಹಾರ ಕ್ರಮವು ಕಣ್ಣಿನ ಆಯಾಸಕ್ಕೆ ಪ್ರಮುಖ ಕಾರಣವಾಗಿರುವುದು. ಸರಿಯಾದ ಆಹಾರ ಕ್ರಮ ಮತ್ತು ಕಣ್ಣುಗಳಿಗೆ ನೆರವಾಗುವಂತಹ ಕೆಲವು ಯೋಗಾಭ್ಯಾಸ ಮಾಡಿಕೊಂಡರೆ ಅದು ಖಂಡಿವಾಗಿಯೂ ನೆರವಾಗಲಿದೆ.
ಕಣ್ಣಿನ ಯೋಗಾಸನಗಳು ಕಣ್ಣುಗಳ ಬಳಲಿಕೆ ಕಡಿಮೆ ಮಾಡುವುದು. ನೀವು ನಿರಂತರವಾಗಿ ಕಣ್ಣು ನೋವು, ಕಣ್ಣಿನಲ್ಲಿ ನೀರು ಬರುವುದು, ದೃಷ್ಟಿ ಮಂದವಾಗುವುದು ಇತ್ಯಾದಿಗಳಿಂದ ಬಳಲುತ್ತಿದ್ದರೆ ಆಗ ನೀವು ಈ ಯೋಗಾಸನಗಳಣ್ನು ಮಾಡಲೇಬೇಕು. ಇದರಿಂದ ಕಣ್ಣಿನ ಮೇಲೆ ಬೀಳುವ ಒತ್ತಡವು ಕಡಿಮೆ ಆಗುವುದು.
ಕಣ್ಣಿಗೆ ಅಂಗೈ ಯೋಗ
ಕಣ್ಣುಗಳಿಗಾಗಿ ಮಾಡುವ ಯೋಗಾಸನದಿಂದ ಕಣ್ಣುಗಳನ್ನು ಆರೋಗ್ಯವಾಗಿ ಇಡಬಹುದು. ಸಮೀಪದೃಷ್ಟಿ ಮತ್ತು ಹೈಪರ್ಮೆಟ್ರೋಪಿಯಾ ಕಣ್ಣುಗಳ ಸ್ನಾಯುಗಳಿಂದಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಈ ಕಣ್ಣಿನ ವ್ಯಾಯಾಮವು ಸಮಸ್ಯೆಗೆ ಪರಿಹಾರ ನೀಡುವುದು. ನೀವು ಕೆಲಸ ಮಾಡುತ್ತಲಿದ್ದರೆ ಮತ್ತು ಕಣ್ಣುಗಳಲ್ಲಿ ಆಯಾಸವಿದ್ದರೆ ಆಗ ನೀವು ಅಂಗೈಯಿಂದ ಮಾಡಬಹುದಾದ ಕಣ್ಣಿನ ಸರಳ ಯೋಗ ಮಾಡಿ.
• ಅಂಗೈಗಳನ್ನು ಉಜ್ಜಿಕೊಂಡು ಕಣ್ಣುಗಳ ಮೇಲಿಡಿ
• ಮೇಜಿನ ಮೇಲೆ ಮುಂಗೈಯನ್ನು ಇಟ್ಟುಕೊಂಡು ಹತ್ತು ನಿಮಿಷ ಕಾಲ ಹಾಗೆ ಇಡಿ
• ಈ ವ್ಯಾಯಾಮವನ್ನು ನಿತ್ಯವೂ ಮಾಡಿದರೆ ಅದರಿಂದ ಆಯಾಸ ನಿವರಣೆ ಆಗುವುದು ಮತ್ತು ಕಣ್ಣುಗಳ ಒತ್ತಡ ಕಡಿಮೆ ಆಗುವುದು
• ಕನ್ನಡಕ ಧರಿಸುವವರು ಕೂಡ ಇದನ್ನು ಮಾಡಬೇಕು.
ಕಣ್ಣು ಮಿಟುಕಿಸುವುದು
ಈ ವ್ಯಾಯಾಮವನ್ನು ದಿನನಿತ್ಯವೂ ಮಾಡಿದರೆ ಅದರಿಂದ ಕಣ್ಣಿನ ಆಯಾಸವು ಕಡಿಮೆ ಆಗುವುದು ಮತ್ತು ಕಣ್ಣಿಗೆ ಹಲವಾರು ರೀತಿಯ ಲಾಭಗಳು ಸಿಗುವುದು.
• ಇದಕ್ಕೆ ನೀವು ಕಣ್ಣುಗಳನ್ನು ವೇಗವಾಗಿ ಮಿಟುಕಿಸಿ ಮತ್ತು ಇದರ ಬಳಿಕ ಕಣ್ಣುಗಳನ್ನು ಮುಚ್ಚಿಕೊಳ್ಳಿ
• 10-15 ನಿಮಿಷ ಕಾಲ ಕಣ್ಣಿಗೆ ವಿಶ್ರಾಂತಿ ನೀಡಿ
• ಹತ್ತು ನಿಮಿಷ ವಿರಾಮ ಪಡೆದು ನೀವು ವ್ಯಾಯಾಮ ಮಾಡಬಹುದು.
ಕಣ್ಣುಗಳನ್ನು ತಿರುಗಿಸುವುದು
ಕಣ್ಣುಗಳ ಬಳಲಿಕೆ ಜತೆಗೆ ದೃಷ್ಟಿ ಉತ್ತಮವಾಗಲು ಕಣ್ಣುಗಳನ್ನು ತಿರುಗಿಸುವ ವ್ಯಾಯಾಮವು ಉತ್ತಮವಾಗಿರುವುದು. ಇದನ್ನು ಎರಡು ವಿಧಾನದ ಮೂಲಕ ಮಾಡಬಹುದು. ಮೊದಲು ಕಣ್ಣುಗಳನ್ನು ವೃತ್ತಾಕಾರದಲ್ಲಿ ತಿರುಗಿಸಿ.
ಈಗ ಕಣ್ಣಿನ ಮುಂದೆ ಒಂದು ವೃತ್ತ ಮಾಡಿಕೊಳ್ಳಿ ಅಥವಾ ಒಂದು ವೃತ್ತ ಇದೆ ಎಂದು ಭಾವಿಸಿಕೊಳ್ಳಿ. 8 ಅಥವಾ ಕಣ್ಣುಗಳನ್ನು ಇದೇ ರೀತಿಯಲ್ಲಿ ತಿರುಗಿಸಿ. ಈ ವ್ಯಾಯಾಮವನ್ನು 10 ಸಲ ಮಾಡಿ. ಇದರಿಂದ ಕಣ್ಣುಗಳ ಸ್ನಾಯುಗಳು ಕೂಡ ಬಲಗೊಳ್ಳುವುದು.
ಗಮನ ತಿರುಗಿಸುವುದು
ನಿರಂತರವಾಗಿ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವ ಪರಿಣಾಮವಾಗಿ ಕಣ್ಣುಗಳು ಹೆಚ್ಚು ಆಯಾಸಗೊಂಡಿರುವುದು ಮತ್ತು ಗಮನ ಕಡಿಮೆ ಆಗುವುದು. ಇಂತಹ ಸಮಯದಲ್ಲಿ ನೀವು ಈ ವ್ಯಾಯಾವನ್ನು ಮಾಡಿದರೆ ಒಳ್ಳೆಯದು.
• ಕಣ್ಣುಗಳಿಂದ ಸ್ವಲ್ಪ ದೂರದಲ್ಲಿ ಒಂದು ಕೈಯನ್ನು ಇಡಿ
• ಹೆಬ್ಬೆರಳನ್ನು ಮೇಲಕ್ಕೆತ್ತಿ ಮತ್ತು ಅದರ ಕಡೆ ಗಮನಹರಿಸಿ
• ಇದಕ್ಕೆ ನೀವು ಒಂದು ಪೆನ್ ಕೂಡ ಬಳಸಬಹುದು
• ಹೆಬ್ಬೆರಳನ್ನು ಮುಖದ ಸಮೀಪಕ್ಕೆ ತನ್ನಿ ಮತ್ತು ತೆಗೆಯಿರಿ
• ಈ ವೇಳೆ ಕಣ್ಣುಗಳು ಹೆಬ್ಬೆರಳನ್ನು ನೋಡುತ್ತಲೇ ಇರಬೇಕು ಎನ್ನುವುದು ಗಮನದಲ್ಲಿರಲಿ
• ಈ ವ್ಯಾಯಾಮವನ್ನು 10-15 ಸಲ ಮಾಡಬಹುದು.