ಮನೆ ಸುದ್ದಿ ಜಾಲ ಲಿಂಗಾಬುಧಿ ಗ್ರಾಮದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಖನಿಜ ಭವನ ಕಟ್ಟಡ ಉದ್ಘಾಟನೆ

ಲಿಂಗಾಬುಧಿ ಗ್ರಾಮದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಖನಿಜ ಭವನ ಕಟ್ಟಡ ಉದ್ಘಾಟನೆ

0

ಮೈಸೂರು(Mysuru): ಮೈಸೂರಿನ ಲಿಂಗಾಬುಧಿ ಗ್ರಾಮದಲ್ಲಿ ನಿರ್ಮಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜ ಭವನ ನೂತನ ಕಚೇರಿ ಕಟ್ಟಡವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಲಿಂಗಾಂಬುಧಿ ಗ್ರಾಮದ ಕೆಬಿಎಲ್ ಸೆಂಚ್ಯೂರಿ ಜೀಸ್-1 ನಲ್ಲಿ  22 ಕುಂಟೆ ಜಾಗದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ 52 ಚದರ ಅಡಿಯಲ್ಲಿ ಖನಿಜ ಭವನ ನಿರ್ಮಿಸಲಾಗಿದೆ. ಇಲಾಖೆ ವತಿಯಿಂದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಅಕ್ರಮವಾಗಿ ಸಾಗಿಸುವ ಖನಿಜಗಳನ್ನು ವಶಕ್ಕೆ ಪಡೆಯುತ್ತಾರೆ. ಇಂತಹ ವಸ್ತುಗಳನ್ನು ಸಂಗ್ರಹಿಸಲು ಈ ಜಾಗ ಬಳಕೆಯಾಗುತ್ತದೆ. ಇದೀಗ ಆ ಕೆಲಸ ನಮ್ಮ ಸರಕಾರದ ಅವಧಿಯಲ್ಲಿ ಪೂರ್ಣಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ, ನಾನಾ ನಿಗಮ ಮಂಡಳಿಗಳ ಅಧ್ಯಕ್ಷರುಗಳಾದ ಎಂ. ಶಿವಣ್ಣಘಿ, ಮಿರ್ಲೆ ಶ್ರೀನಿವಾಸ್‌ಗೌಡ, ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ, ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ. ರಶ್ಮಿ ಹಾಗೂ ಇತರರು ಇದ್ದರು.