ಮನೆ ಸುದ್ದಿ ಜಾಲ ಲಿಂಗಾಬುಧಿ ಗ್ರಾಮದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಖನಿಜ ಭವನ ಕಟ್ಟಡ ಉದ್ಘಾಟನೆ

ಲಿಂಗಾಬುಧಿ ಗ್ರಾಮದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಖನಿಜ ಭವನ ಕಟ್ಟಡ ಉದ್ಘಾಟನೆ

0

ಮೈಸೂರು(Mysuru): ಮೈಸೂರಿನ ಲಿಂಗಾಬುಧಿ ಗ್ರಾಮದಲ್ಲಿ ನಿರ್ಮಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜ ಭವನ ನೂತನ ಕಚೇರಿ ಕಟ್ಟಡವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಲಿಂಗಾಂಬುಧಿ ಗ್ರಾಮದ ಕೆಬಿಎಲ್ ಸೆಂಚ್ಯೂರಿ ಜೀಸ್-1 ನಲ್ಲಿ  22 ಕುಂಟೆ ಜಾಗದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ 52 ಚದರ ಅಡಿಯಲ್ಲಿ ಖನಿಜ ಭವನ ನಿರ್ಮಿಸಲಾಗಿದೆ. ಇಲಾಖೆ ವತಿಯಿಂದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಅಕ್ರಮವಾಗಿ ಸಾಗಿಸುವ ಖನಿಜಗಳನ್ನು ವಶಕ್ಕೆ ಪಡೆಯುತ್ತಾರೆ. ಇಂತಹ ವಸ್ತುಗಳನ್ನು ಸಂಗ್ರಹಿಸಲು ಈ ಜಾಗ ಬಳಕೆಯಾಗುತ್ತದೆ. ಇದೀಗ ಆ ಕೆಲಸ ನಮ್ಮ ಸರಕಾರದ ಅವಧಿಯಲ್ಲಿ ಪೂರ್ಣಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ, ನಾನಾ ನಿಗಮ ಮಂಡಳಿಗಳ ಅಧ್ಯಕ್ಷರುಗಳಾದ ಎಂ. ಶಿವಣ್ಣಘಿ, ಮಿರ್ಲೆ ಶ್ರೀನಿವಾಸ್‌ಗೌಡ, ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ, ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ. ರಶ್ಮಿ ಹಾಗೂ ಇತರರು ಇದ್ದರು.

ಹಿಂದಿನ ಲೇಖನಮೈಸೂರು: ಹುಲಿಮರಿಗಳ ದರ್ಶನಕ್ಕೆ ಚಾಲನೆ
ಮುಂದಿನ ಲೇಖನ5, 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವುದಿಲ್ಲ: ಬಿ.ಸಿ.ನಾಗೇಶ್‌