ಮನೆ ರಾಜಕೀಯ ಕೋವಿಡ್ ನಿಯಂತ್ರಣದ ಬಗ್ಗೆ ಓವರ್ ಆಕ್ಟಿಂಗ್ ಬೇಡ: ಹೇಳಿಕೆ ನೀಡಿ  ಕಕ್ಕಾಬಿಕ್ಕಿಯಾದ ಸಚಿವ ಆರ್.ಅಶೋಕ್

ಕೋವಿಡ್ ನಿಯಂತ್ರಣದ ಬಗ್ಗೆ ಓವರ್ ಆಕ್ಟಿಂಗ್ ಬೇಡ: ಹೇಳಿಕೆ ನೀಡಿ  ಕಕ್ಕಾಬಿಕ್ಕಿಯಾದ ಸಚಿವ ಆರ್.ಅಶೋಕ್

0

ಬೆಳಗಾವಿ(Belagavi): ಕೋವಿಡ್ ನಿಯಂತ್ರಣದ ಬಗ್ಗೆ ಅತಿ ಹೆಚ್ಚು ಓವರ್ ಆಕ್ಟಿಂಗ್ ಮಾಡದೆ ಸಾರ್ವಜನಿಕರ ಫ್ರೆಂಡ್ಲಿ ಆಗಿ ನಿಲುವು ಕೈಗೊಳ್ಳಬೇಕು  ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ಸೋಮವಾರ ಈ ಹೇಳಿಕೆ ನೀಡಿದ್ದು, ಹಾಗಾದರೆ ಯಾರು ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ? ಸಚಿವರೇ? ಸರ್ಕಾರವೇ ಅಥವಾ ಜನಸಾಮಾನ್ಯರೇ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಅಶೋಕ್ ಕೆಲಕಾಲ ಕಕ್ಕಾಬಿಕ್ಕಿಯಾದರು. ಕೊನೆಗೆ ನಾನೇ ಓವರ್ ಆಕ್ಟಿಂಗ್ ಮಾಡುತ್ತಿದ್ದೇನೆ ಎಂದು ತಮ್ಮ ಹೇಳಿಕೆಗೆ ಸ್ಪಷ್ಟವಾದ ಉತ್ತರ ಕೊಡದೆ ಜಾರಿಕೊಂಡರು.

ಇನ್ನು ಇದೇ ಸಂದರ್ಭದಲ್ಲಿ, ಕೋವಿಡ್ ಹಿನ್ನಲೆಯಲ್ಲಿ ಸೋಮವಾರ ಮಧ್ಯಾಹ್ನ ಸಭೆ ನಡೆಯಲಿದೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡಾ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಆಕ್ಸಿಜನ್ ಘಟಕ, ಔಷಧ ದಾಸ್ತಾನು ಬಗ್ಗೆಯೂ ಚರ್ಚೆ ನಡೆಯಲಿದೆ. ಹೊಸ ವರ್ಷಕ್ಕೆ ಮಾರ್ಗಸೂಚಿ ನಿಗದಿ ಮಾಡುವ ಬಗ್ಗೆಯೂ ಚರ್ಚೆ ಆಗಲಿದೆ. ಯಾರೂ ಹೆದರುವ ಆಗುವ ಅಗತ್ಯ ಇಲ್ಲ. ವ್ಯಾಪಾರ, ಶಿಕ್ಷಣ, ಕೈಗಾರಿಕೆಗೆ ತೊಂದರೆ ಆಗಲ್ಲ. ಸಾಮಾನ್ಯವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಯಾರೂ ಭಯ ಬೀಳುವ ಅಗತ್ಯ ಇಲ್ಲ ಎಂದರು.

ಸಿಎಂ ಜೊತೆ ಚರ್ಚೆ ನಡೆಸಿ ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುದು ಎಂದು ಇದೇ ಸಂದರ್ಭದಲ್ಲಿ  ತಿಳಿಸಿದರು.

ಕೋವಿಡ್ ಹಿನ್ನಲೆಯಲ್ಲಿ ಆರ್. ಅಶೋಕ್ ಭಾನುವಾರ ಸಭೆ ಕರೆದಿದ್ದರು. ಆದರೆ ಈ ಸಭೆಯ ಬಗ್ಗೆ ಗೊತ್ತೇ ಇಲ್ಲ ಎಂದು ಸುಧಾಕರ್ ಹೇಳಿದ್ದರು. ಪರಿಣಾಮ ಸಭೆಯೂ ರದ್ದಾಗಿತ್ತು. ಈ ಮೂಲಕ ಎರಡು ಸಚಿವರ ನಡುವೆ ಭಿನ್ನಾಭಿಪ್ರಾಯ ಬಹಿರಂಗವಾಗಿತ್ತು.