ಮನೆ ರಾಜ್ಯ ಆರ್.ವಿ.ದೇಶಪಾಂಡೆಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ

ಆರ್.ವಿ.ದೇಶಪಾಂಡೆಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ

0

ಬೆಂಗಳೂರು(Bengaluru): ವಿಧಾನಸಭೆಯಿಂದ ನೀಡಲಾಗುವ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಣೆಯಾಗಿದ್ದು, ಕಾಂಗ್ರೆಸ್‌’ನ ಆರ್.ವಿ. ದೇಶಪಾಂಡೆ ಪ್ರಶಸ್ತಿ ಲಭಿಸಿದೆ.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯು ಅವರನ್ನು ಆಯ್ಕೆ ಮಾಡಿದೆ. ಸಭಾನಾಯಕ, ವಿರೋಧ ಪಕ್ಷದ ನಾಯಕರು ಸಮಿತಿಯಲ್ಲಿ ಇದ್ದರು.

75 ವರ್ಷದ ದೇಶಪಾಂಡೆ ಅವರು ಇಡೀ ಸದನದಲ್ಲಿರುವ ಹಿರಿಯ ಶಾಸಕರ ಪೈಕಿ ಒಬ್ಬರಾಗಿದ್ದಾರೆ. 1983ರಲ್ಲಿ ವಿಧಾನಸಭೆ ಪ್ರವೇಶಿಸಿದ ದೇಶಪಾಂಡೆ 8 ಬಾರಿ ಗೆದ್ದಿದ್ದಾರೆ. ಒಂದು ಬಾರಿಯಷ್ಟೇ ಸೋತಿದ್ದಾರೆ. ಕೈಗಾರಿಕೆ, ಶಿಕ್ಷಣ ಸೇರಿದಂತೆ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. 10 ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದವರು. ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.